Get Updates
Get notified of breaking news, exclusive insights, and must-see stories!

ಪಾದರಕ್ಷೆಯಲ್ಲಿ ಗುಟ್ಟಾಗಿ ಕುಳಿತ ನಾಗರಹಾವು: ಕಾಲು ಹಾಕಲು ಮುಂದಾಗುತ್ತಿದ್ದಂತೆ ಹೆಡೆ ಎತ್ತಿದ ನಾಗಪ್ಪ

ಮೈಸೂರು, ಅಕ್ಟೋಬರ್ 10: ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಈ ವಿಡಿಯೋ ನಿಮ್ಮನ್ನು ಜಾಗರೂಕರಾಗಿರಿ ಎಂದು ಎಚ್ಚರಿಸುತ್ತದೆ. ಇತ್ತೀಚೆಗೆ ನಾಗರಹಾವಿನ ವಿಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಆ ವಿಡಿಯೋದಲ್ಲಿ ಶೂಗಳಲ್ಲಿ ಅಡಗಿಕೊಂಡಿದ್ದ ಹಾವು ಇದ್ದಕ್ಕಿದ್ದಂತೆ ಹೆಡೆ ಎತ್ತಿ ಆಡತೊಡಗಿದೆ. ನಾಗರಹಾವು ಇರುವುದು ತಿಳಿಯದೆ ವ್ಯಕ್ತಿಯೊಬ್ಬರು ಶೂಗಳನ್ನು ಧರಿಸಲು ಮುಂದಾಗಿದ್ದರು. ಅಪಾಯಕಾರಿ ನಾಗರಹಾವು ತನಗೆ ತೊಂದರೆಯಾದರೆ ಕಚ್ಚದಿರದು. ಆಗ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು. ಅದೃಷ್ಟವಶಾತ್ ಶೂನಲ್ಲಿ ಅಡಗಿದ್ದ ಹಾವು ವ್ಯಕ್ತಿಗೆ ಕಚ್ಚಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಭಯಾನಕ ವಿಡಿಯೋ ಕರ್ನಾಟಕದ ಮೈಸೂರಿನದ್ದು. ಮನೆಯ ಹೊರಗಿನ ಅಂಗಳದಲ್ಲಿ ಇರಿಸಲಾಗಿದ್ದ ಶೂಗಳಲ್ಲಿ ಅಪಾಯಕಾರಿ ನಾಗರಹಾವು ಅಡಗಿಕೊಂಡಿರುವುದು ಯಾರಿಗೂ ತಿಳಿದಿರಲಿಲ್ಲ. ಮನೆಯೊಳಗಿಂದ ಬಂದು ಪಾದರಕ್ಷೆ ಧರಿಸಲು ಪಾದಗಳನ್ನು ಶೂಗಳಲ್ಲಿ ಇಡುವಷ್ಟರಲ್ಲಿ ವ್ಯಕ್ತಿಯ ಕಣ್ಣುಗಳು ಒಳಗೆ ಅಡಗಿದ್ದ ನಾಗರಹಾವಿನ ಮೇಲೆ ಬಿದ್ದು ಭಯದಿಂದ ಕಿರುಚತೊಡಗಿದ್ದಾರೆ. ಆತನ ಕಿರುಚಾಟ ಕೇಳಿದ ತಕ್ಷಣ ಮನೆಯ ಇತರ ಸದಸ್ಯರು ಗಾಬರಿಯಿಂದ ಓಡಿ ಬಂದು ನೋಡಿದಾಗ ಶೂ ಒಳಗೆ ಹಾವು ಇರುವುದು ಕಂಡು ಬಂದಿದೆ.

ವಿಡಿಯೋ ವೈರಲ್

ವಿಡಿಯೋ ವೈರಲ್

ಶೂ ಒಳಗಿದ್ದ ನಾಗರ ಹಾವು ನೋಡಿ ಮನೆಯವರೂ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಹಾವು ಹಿಡಿಯುವವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಉರಗ ತಜ್ಞ ಸ್ಥಳಕ್ಕೆ ಬಂದು ಕಬ್ಬಿಣದ ಸಲಾಕೆಯಿಂದ ಪಾದರಕ್ಷೆಯನ್ನು ಸರಿಸಿದ ಕೂಡಲೇ ಹಾವು ಹೆಡೆ ಎತ್ತಿ ನಿಂತಿತು. ಮನೆಯ ಹೊರಗೆ ಇಟ್ಟಿದ್ದ ಪಾದರಕ್ಷೆಯಲ್ಲಿ ನಾಗರ ಹಾವು ಹೇಗೆ ಕಾಣಿಸಿಕೊಂಡಿದೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸ್ಥಳಕ್ಕೆ ಬಂದ ವ್ಯಕ್ತಿ ಅದನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಹಾವಿನ ರಕ್ಷಣೆ

ಹಾವಿನ ರಕ್ಷಣೆ

ನಾಗರಹಾವಿನ ಚಲನವಲನದಿಂದ ಅದು ದಾಳಿ ಮಾಡಲು ಹೊರಟಂತೆ ತೋರುತ್ತಿತ್ತು. ಆದರೆ ಉರಗ ತಜ್ಞ ಸಾಕಷ್ಟು ಪ್ರಯತ್ನದಿಂದ ವಿಷಕಾರಿ ಹಾವನ್ನು ನಿಯಂತ್ರಿಸಿ ಕೋಲಿನ ಸಹಾಯದಿಂದ ಮೇಲಕ್ಕೆತ್ತಿ ಪೆಟ್ಟಿಗೆಯಲ್ಲಿಟ್ಟು ಮುಚ್ಚಿದ್ದಾರೆ. ಹಾವು ಪೆಟ್ಟಿಗೆಯಲ್ಲಿ ಸಿಲುಕಿದ ಕೂಡಲೇ ಅಲ್ಲಿದ್ದವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಹಾವು

ಪ್ರಾಣಾಪಾಯದಿಂದ ಪಾರಾದ ಹಾವು

ನಾಗರಹಾವು ವ್ಯಕ್ತಿಗೆ ಯಾವುದೇ ತೊಂದರೆಯನ್ನು ಮಾಡಿಲ್ಲ. ವ್ಯಕ್ತಿಗೆ ಮೊದಲೇ ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಹಾವು ಬೆಚ್ಚಗೆ ಶೂ ಒಳಗೆ ಮಲಗಿರುವುದನ್ನು ಕಂಡು ವ್ಯಕ್ತಿ ಗಾಬರಿಗೊಂಡಿದ್ದಾರೆ. ಇನ್ನೇನು ಶೂ ಹಾಕಲು ಹೊರಟಿದ್ದ ವ್ಯಕ್ತಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ

4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ

ಇದೀಗ 1 ನಿಮಿಷಕ್ಕೂ ಹೆಚ್ಚು ಅವಧಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನಾಗರ ಹಾವನ್ನು ಕಂಡು ಬಳಕೆದಾರರೂ ಬೆಚ್ಚಿ ಬಿದ್ದಿದ್ದಾರೆ. ಹಾವನ್ನು ಹಿಡಿದ ವ್ಯಕ್ತಿಯನ್ನು ಜನ ಹೊಗಳಿದ್ದಾರೆ. ಹಾವು ಯಾರ ಪಾದರಕ್ಷೆಯಲ್ಲಿ ಅಡಗಿಕೊಂಡಿದೆಯೋ ಆ ವ್ಯಕ್ತಿಯನ್ನು ಉಳಿಸಿದ್ದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+