ಪಾಕ್ ಪರ ಘೋಷಣೆ; ಸಿಎಂ ಯಡಿಯೂರಪ್ಪ ಅನುಮಾನ ಏನು?
Recommended Video

ಮೈಸೂರು, ಫೆಬ್ರವರಿ 21: ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನ ಎಂಬ ವಿದ್ಯಾರ್ಥಿನಿ ಪರ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ. ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಸಂಬಂಧ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಆ ಹುಡುಗಿಗೆ ನಕ್ಸಲ್ ಸಂಬಂಧ ಇತ್ತು' ಎಂದು ಹೇಳಿದ್ದಾರೆ.
'ಅಮೂಲ್ಯ ಎನ್ನುವ ಹುಡುಗಿ ಪಾಕ್ ಪರ ವಹಿಸಿ ಮಾತನಾಡಿರುವ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ರ ಶಿಕ್ಷೆ ವಿಧಿಸುತ್ತೇವೆ. ಅವಾಗಲೇ ಇಂತಹ ಘಟನೆಗಳು ಮರುಕಳಿಸುವುದಿಲ್ಲ' ಎಂದು ಹೇಳಿದರು.
'ಅಮೂಲ್ಯ ತಂದೆಗೆ ಜಾಮೀನು ಕೊಡಬಾರದು. ಅವಳ ಕೈ ಕಾಲು ಮುರಿಯಿರಿ ಎಂದು ಅವರ ತಂದೆಯೇ ಹೇಳಿದ್ದಾರೆ. ಆ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ. ಈ ಬಗ್ಗೆ ನಮ್ಮ ಪೊಲೀಸ್ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ' ಎಂದು ತಿಳಿದು ಬಂದಿದೆ ಎಂದರು.

ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ ಗುರುವಾರ ಸಂಜೆ ಹಿಂದೂ ಮುಸ್ಲಿಂ, ಸಿಕ್, ಇಸಾಯಿ ಸಂಘಟನೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಈ ವೇಳೆ ಓವೈಸಿ ಕೂಡ ಇದ್ದರು. ಅಮೂಲ್ಯಳನ್ನು ಬಂಧಿಸಿ, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತ್ತ ಅಮೂಲ್ಯ ಹೇಳಿಕೆ ಖಂಡಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.












Click it and Unblock the Notifications