ಸಿದ್ದರಾಮಯ್ಯ ಉಪಕಾರ ಸ್ಮರಣೆ ಇಲ್ಲದ ದುರಹಂಕಾರದ ಮನುಷ್ಯ: ಶ್ರೀನಿವಾಸ್ ಪ್ರಸಾದ್
ಮೈಸೂರು, ನವೆಂಬರ್ 14 : ಒಂದು ಕಾಲದಲ್ಲಿ ಅಂಗಲಾಚಿಕೊಂಡು ನನ್ನ ಮನೆಗೆ ಬಂದಿದ್ದ ಸಿದ್ದರಾಮಯ್ಯ ಇದೀಗ ದರ್ಪದಿಂದ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹರಿಹಾಯ್ದರು.
ಕೆ.ಆರ್.ನಗರದಲ್ಲಿ ನಡೆದ ತಾಲೂಕು ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ಬಿಜೆಪಿ ಮುಖಂಡ ಹೊಸಹಳ್ಳಿವೆಂಕಟೇಶ್ ಬೆಂಬಲಿಗರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಏಕೈಕ ಉದ್ದೇಶದಿಂದ ಸಿದ್ದರಾಮಯ್ಯ ನನ್ನ ಮನೆಗೆ ಬಂದು ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗಿ ಗೆಲುವು ಸಾಧಿಸಿ ರಾಜಕೀಯ ಪುನರ್ ಜನ್ಮ ಪಡೆದುಕೊಂಡರು. ಆದರೆ ಅದನ್ನೆಲ್ಲ ಮರೆತು ದೌಲತ್ತಿನಿಂದ ನಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾಷಣದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕಿಡಿಕಾರಿದ ಅವರು, ಉಪಕಾರ ಸ್ಮರಣೆ ಇಲ್ಲದ ದುರಂಹಾಕರದ ಮನೋಭಾವನೆಯಿಂದ ಕೂಡಿರುವ ಸಿದ್ದರಾಮಯ್ಯ ಅವರು ಅಧಿಕಾರಕ್ಕಾಗಿ ಕಂಡವರ ಕಾಲು ಹಿಡಿಯುವ ಛಾತಿ ಮೈಗೂಡಿಸಿಕೊಂಡಿದ್ದು, ಮುಖ್ಯಮಂತ್ರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ, ಕಾಂಗ್ರೆಸ್ ನ ಹಿರಿಯ ತಲೆಯಾಳು ಎಚ್.ವಿಶ್ವನಾಥ್ ಸೇರಿದಂತೆ ಇತರೆ ಘಟಾನುಘಟಿ ನಾಯಕರುಗಳು ಪಕ್ಷ ತೊರೆದಿದ್ದಾರೆ. ಸದಾ ಸ್ವಜನ ಪಕ್ಷಪಾತ ಮಾಡಿಕೊಂಡು ತನಗೆ ಸಹಾಯ ಮಾಡಿದವರನ್ನು ಮರೆಯುತ್ತಿರುವ ಅವರನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ ಎಂದರು.
ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಸಂಸ್ಕೃತಿ ಇಲ್ಲದ ಸಚಿವರಾಗಿದ್ದು, ತನ್ನ ಖಾತೆಯ ಕೆಲಸ ಮಾಡುವ ಬದಲು ಸಿದ್ದರಾಮಯ್ಯನ ಇಷ್ಟ ಕಷ್ಟಗಳನ್ನು ಪೂರೈಸುವ ಸೇವಕನಾಗಿದ್ದಾನೆ ಇಂತಹವರಿಂದ ರಾಜ್ಯದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಕಿಡಿಕಾರಿದರು.












Click it and Unblock the Notifications