ಮೈಸೂರು ವಿವಿ ಕುಲಪತಿಗೆ ಮೋಸ: ಸೈಟ್ ವಿಚಾರದಲ್ಲಿ ವಂಚನೆ

ಮೈಸೂರು, ಜೂನ್ 20: ಮೈಸೂರು ವಿಶ್ವವಿದ್ಯಾನಿಲಯದ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕುಲಪತಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಹೇಮಂತ್ ಕುಮಾರ್ ಮೋಸ ಆಗಿರುವ ಬಗ್ಗೆ ಆರೋಪ ಮಾಡಿದ್ದಾರೆ.

ಸಹಕಾರ ಸಂಘ ನಿವೇಶನ ನೀಡುವುದಾಗಿ ಹಣ ಕಟ್ಟಿಸಿಕೊಂಡು ವಿವಿ.ಉದ್ಯೋಗಿಗಳಲ್ಲದವರಿಗೆ ಸೈಟ್ ನೀಡಿದೆ. ಆದರೆ, ಸಹಕಾರ ಸಂಘದ ಅಧ್ಯಕ್ಷರಿಂದ ಐದಾರು ಕೋಟಿ ಹಣ ವಂಚನೆ ಆರೋಪ ಕೇಳಿಬಂದಿದೆ. ಹಾಲಿ ಹಾಗೂ ಮಾಜಿ ಅಧ್ಯಕ್ಷರ ತಿಕ್ಕಾಟಕ್ಕೆ ವಿವಿ ಉದ್ಯೋಗಿಗಳು ನಿವೇಶನ ಕಳೆದುಕೊಂಡಿದ್ದಾರೆ.

ವಿವಿ ಕುಲಪತಿ, ಕುಲಸಚಿವ ಸೇರಿದಂತೆ ವಿವಿಧ ವಿಭಾಗಗಳ ಐನೂರಕ್ಕೂ ಹೆಚ್ಚು ಉದ್ಯೋಗಿಗಳಿಗೆ ನಿವೇಶನ ನೀಡದೆ ವಂಚನೆ ಮಾಡಲಾಗಿದೆಯಂತೆ. ನಿವೇಶನದ ಮಾರುಕಟ್ಟೆ ಬೆಲೆ 25-30 ಲಕ್ಷ ರೂಪಾಯಿ, ಸಕ್ರಿಯ ಸದಸ್ಯರಲ್ಲದ ಸಹ ಸದಸ್ಯರಿಗೆ ನೀಡಿದ್ದು 6-8 ಲಕ್ಷ ರೂಪಾಯಿಗಳು. ಚುನಾವಣೆ ನೀತಿ ಸಂಹಿತೆ ಇದ್ದರೂ, 3 ಜನರಿಗೆ ಆಡಳಿತ ಮಂಡಳಿ ನಿವೇಶನ ರಿಜಿಸ್ಟರ್ ಮಾಡಿತ್ತು.

Chancellor Has Been Defrauded By The Mysore University Employeess Housing Co-operative Society

ಆಡಳಿತ ಮಂಡಳಿ ಸಹಕಾರ ನೀತಿ ನಿಯಮಗಳನ್ನ ಗಾಳಿಗೆ ತೂರಿ, ಮಾರುಕಟ್ಟೆ ಬೆಲೆಗಿಂತ ಕನಿಷ್ಠ ಬೆಲೆಗೆ ನೋಂದಣಿ ಮಾಡಿದೆ. ಸಂಘದ ಸದಸ್ಯರಲ್ಲದ 19 ಜನರಿಗೆ ಆಡಳಿತ ಮಂಡಳಿ ನಿವೇಶನ ಮಾರಾಟ ಮಾಡಿದೆ. ಕುಲಪತಿ, ಕುಲಸಚಿವರು ಸೇರಿದಂತೆ ಲಕ್ಷ ಲಕ್ಷ ಹಣ ಕಟ್ಟಿರುವ ಐನೂರಕ್ಕೂ ಹೆಚ್ಚು ಉದ್ಯೋಗಿಳಿಗೆ ನಿವೇಶನ ನೀಡದೆ ವಂಚಿಸಿದೆ.

ನಾನೊಬ್ಬ ಸಾಮಾನ್ಯ ಸದಸ್ಯ, ನಾನು ಸಹ ನಿವೇಶನಕ್ಕಾಗಿ ನಾಲ್ಕು ಕಂತುಗಳಲ್ಲಿ ಹಣ ಕಟ್ಟಿದ್ದೇನೆ. 2006 -07 ರಲ್ಲೇ ನಾನು ಸಹಕಾರ ಸಂಘದ ಸದಸ್ಯನಾಗಿದ್ದೇನೆ. ಸದಸ್ಯರಲ್ಲದವರಿಗೆ ನಿವೇಶನ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ವಿ.ಸಿ ಪ್ರಶ್ನೆ ಮಾಡಿದ್ದಾರೆ.

ಸದಸ್ಯರು ದೂರು ನೀಡಿದರೆ, ಕಾನೂನು ಸಲಹೆ ಪಡೆದು ಕ್ರಮಕೈಗೊಳ್ಳುತ್ತೇನೆ ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+