ಮೈಸೂರಿನ ಲಲಿತ್ ಮಹಲ್ ಖಾಸಗಿ ಸುಪರ್ದಿಗೆ
ಮೈಸೂರು, ಮೇ 25: ಕೇಂದ್ರ ಸರ್ಕಾರ ಖಾಸಗೀಕರಣದ ಮೊದಲ ಹೆಜ್ಜೆ ಇಟ್ಟಿದೆ. ನಷ್ಟದಲ್ಲಿ ನಡೆಯುತ್ತಿರುವ ದೇಶದ ಪ್ರಮುಖ ಹೋಟೆಲ್ ಗಳನ್ನು ಖಾಸಗಿಯವರ ಸುಪರ್ದಿಗೆ ವಹಿಸಲು ಮುಂದಾಗಿದೆ.
ಮೈಸೂರಿನ ಲಲಿತ ಮಹಲ್ ಹೋಟೆಲ್ ಸೇರಿದಂತೆ ಭಾರತೀಯ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ನಿಗಮ (ಐಟಿಡಿಸಿ) ನಡೆಸುತ್ತಿರುವ 8 ಹೋಟೆಲ್‌ಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ. [ಮೇ.28ರಂದು ಯದುವೀರ ಅರಸ್ ಪಟ್ಟಾಭಿಷೇಕ]

ಭುವನೇಶ್ವರ, ಪುರಿ, ಜಮ್ಮು, ಗುವಾಹಟಿ, ಭೋಪಾಲ್, ರಾಂಚಿ ಮತ್ತು ಪುದುಚೆರಿಯಲ್ಲಿನ ಒಟ್ಟು 8 ಹೋಟೆಲ್‌ಗಳನ್ನು ಖಾಸಗೀಕರಣ ಮಾಡಲಾಗುವುದು. ಐಟಿಡಿಸಿ ಒಟ್ಟು 16 ಹೋಟೆಲ್ ಗಳನ್ನು ನಡೆಸುತ್ತಿದೆ. ಖಾಸಗೀಕರಣ ಮಾಡಲು ನಿರ್ಧರಿಸಿರುವ ಹೋಟೆಲ್ ಗಳಿಂದ 15 ಕೋಟಿ ನಷ್ಟ ಆಗುತ್ತಿದೆ. ಹಾಗಾಗಿ ಈ ಮಾರ್ಗ ಅನುಸರಿಸಬೇಕಿದೆ ಎಂದು ತಿಳಿಸಿದ್ದಾರೆ.
ಲಾಭದ ಹಾದಿಯಲ್ಲಿ ಸಾಗಬೇಕಾದರೆ ಖಾಸಗೀಕರಣ ಪರಿಹಾರ ಮಾರ್ಗ. ಮುಂದಿನ ತಿಂಗಳು ಖಾಸಗೀಕರಣ ಪ್ರಕ್ರಿಯೆ ಆರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.[ಬೆಂಗಳೂರು-ಮೈಸೂರು ಹೆದ್ದಾರಿ ಹಂಪ್ ಮುಕ್ತ?]
ವಿಮಾನಯಾನ ದರಕ್ಕೆ ಮಿತಿ
ವಿಮಾನಗಳ ಪ್ರಯಾಣಕ್ಕೆ ಮೂಲ ದರವೊಂದನ್ನು ನಿಗದಿ ಮಾಡಿಕೊಳ್ಳಬೇಕು. ಒಮ್ಮೆ ಅಗತ್ಯಕ್ಕಿಂತ ಹೆಚ್ಚಿನ ದರ ವಿಧಿಸುವುದು, ಇನ್ನೊಮ್ಮೆ ಪೈಪೋಟಿ ಹೆಸರಿನಲ್ಲಿ 500 ರು ಗೂ ಟಿಕೆಟ್ ನೀಡುವುದು, ಇಂಥ ಪ್ರಕ್ರಿಯೆಗಳು ಸರಿಯಲ್ಲ. ಇದು ನಾಗರೀಕರ ಜೇಬಿಗೆ ಕೆಲವೊಮ್ಮೆ ಕತ್ತರಿ ಹಾಕುತ್ತದೆ. ಇವುಗಳಿಗೂ ಒಂದು ಸೂಕ್ತ ಮಾರ್ಗದರ್ಶನ ಸೂತ್ರ ಜಾರಿಮಾಡಬೇಕಿದೆ ಎಂದು ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications