ರಾಜ್ಯದ ಪರವಾಗಿ ಕಾವೇರಿ ತೀರ್ಪು ಬರಲೆಂದು ವಿಶೇಷ ಪ್ರಾರ್ಥನೆ
ಮೈಸೂರು, ಜುಲೈ 11: ಜೀವಜಲ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದಿನಿಂದ (ಜುಲೈ 11) ವಿಚಾರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ತೀರ್ಪು ರಾಜ್ಯದ ಪರವಾಗಿಯೇ ಆಗಲಿ ಎಂದು ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಅಗ್ರಹಾರದಲ್ಲಿರುವ 101 ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕರ್ತರು ಮಾತನಾಡಿ ಕಾವೇರಿ ವಿಚಾರದಲ್ಲಿ ತಮಿಳುನಾಡು ಮತ್ತೆ ತಗಾದೆ ತೆಗೆದಿದ್ದು, ಕಾವೇರಿ ನೀರು ಹರಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ಆರಂಭವಾಗಲಿದ್ದು ರಾಜ್ಯದ ಪರವಾಗಿಯೇ ತೀರ್ಪು ಬರಲಿ ಎಂದು ವಿಘ್ನ ವಿನಾಯಕನನ್ನು ಪೂಜಿಸಿದ್ದೇವೆ.

ರಾಜ್ಯದ ರೈತರು ಅದರಲ್ಲೂ ಮೈಸೂರು, ಮಂಡ್ಯ ಭಾಗದ ರೈತರು ನೀರಿಲ್ಲದೇ ಬೆಳೆ ಬೆಳೆಯಲು ಸಾಧ್ಯವಾಗದೇ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಿಂದ ರಾಜ್ಯದ ಪರವಾಗಿಯೇ ತೀರ್ಪು ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.












Click it and Unblock the Notifications