ಸ್ಮಾರ್ಟ್‌ಫೋನ್ ನೀಡದ್ದಕ್ಕೆ ಕಾವಾ ವಿದ್ಯಾರ್ಥಿ ಆತ್ಮಹತ್ಯೆ

ಕಾವಾದ ಚಿತ್ರಕಲಾ ವಿಭಾಗದಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಓದುತ್ತಿದ್ದ ಮನೋಜ್ ಪತ್ತಾರ್(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬನ್ನಿಮಂಟಪದ ಮೇದರ ಬ್ಲಾಕ್ ನಿವಾಸಿ ಕಲಾವಿದ ರವೀಂದ್ರ ಪತ್ತಾರ್ ಅವರ ಪುತ್ರ ಮನೋಜ್ ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.[ಮೆಡಿಕಲ್ ಸೀಟು ಭೀತಿ: ವಿದ್ಯಾರ್ಥಿನಿ ಆತ್ಮಹತ್ಯೆ]
ಮನೋಜ್ ಕಾಲೇಜು ಸೇರಿದ ದಿನದಿಂದ ಪ್ರತಿದಿನ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ನೀಡಬೇಕೆಂದು ಅಪ್ಪನನ್ನು ಕೇಳುತ್ತಿದ್ದ. ತಂದೆಯವರು "15-20 ಸಾವಿರ ರೂಪಾಯಿಯ ಸ್ಮಾರ್ಟ್‌ಫೋನ್ ಕೊಡಿಸಲು ಆಗದು. ಕಡಿಮೆ ಬೆಲೆಯ ಫೋನ್ ಮಮೂಲಿ ಸೆಲ್‌ಫೋನ್ ಖರೀದಿಸಿ ಕೊಡುತ್ತೇನೆ" ಎಂದು ಮಗನಿಗೆ ಬುದ್ದಿ ಮಾತು ಹೇಳುತ್ತಿದ್ದರು.[ಬೆಂಗಳೂರು: ಚಲಿಸುವ ರೈಲಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ]
ಶನಿವಾರ ಮತ್ತೆ ಮನೋಜ್ ತಂದೆಯವರಲ್ಲಿ ಸ್ಮಾರ್ಟ್‌ಫೋನ್ ಬೇಡಿಕೆ ಇಟ್ಟಿದ್ದಾನೆ. ತಂದೆಯವರು "ನಾನು ಬಡವ. ಅಷ್ಟೊಂದು ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ನೀಡಲು ನನ್ನಲ್ಲಿ ದುಡ್ಡಿಲ್ಲ. ಮೊದಲು ನೀನು ಚೆನ್ನಾಗಿ ಓದಿ ಉತ್ತಮ ಹೆಸರು ಗಳಿಸು. ಬಳಿಕ ನೀನು ಕೇಳಿದ ಮೊಬೈಲ್ ತೆಗೆದುಕೊಡುತ್ತೇನೆ "ಎಂದು ಮತ್ತೊಮ್ಮೆ ಮಗನಿಗೆ ಬುದ್ದಿ ಹೇಳಿದ್ದಾರೆ.
ತಂದೆಗೆ ಮಾತಿಗೆ ಬೇಸರವಾಗಿ ಮನೋಜ್ ಭಾನುವಾರ ಪೋಷಕರು ಮನೆಯಲ್ಲಿಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಾವಂತ ವಿದ್ಯಾರ್ಥಿ ಎಂದು ಕಾವಾದಲ್ಲಿ ಹೆಸರು ಗಳಿಸಿದ್ದ ಮನೋಜ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾಗಿದ್ದ. ರವೀಂದ್ರ ಪತ್ತಾರ್ ಅವರು ದಸರಾ ಸಂದರ್ಭದಲ್ಲಿ ಗಜ ಪಡೆಯ ಆನೆಗಳಿಗೆ ಬಣ್ಣ ಹಚ್ಚುವ ಸಂದರ್ಭದಲ್ಲಿ ಮನೋಜ್ ಅಪ್ಪನ ಕೆಲಸಕ್ಕೆ ಸಹಾಯ ಮಾಡುತ್ತಿದ್ದ.












Click it and Unblock the Notifications