Get Updates
Get notified of breaking news, exclusive insights, and must-see stories!

'ಕಾಂಗ್ರೆಸ್‌' ಭದ್ರಕೋಟೆಯಲ್ಲಿ ‘ಕಮಲ’ ಕಹಳೆ: ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ರೋಡ್ ಶೋ

ಮೈಸೂರು ಜಿಲ್ಲೆಯ ಕಾಂಗ್ರೆಸ್ ಭದ್ರ ಕೋಟೆ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಭರ್ಜರಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿರುವುದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಮೈಸೂರು, ಮಾರ್ಚ್ 6: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದ್ದು, ಅದರಲ್ಲೂ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನೇ ಕಟ್ಟಿಕೊಂಡಿದೆ. ಇಂತಹ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ ಅಲ್ಲಿ ಕಮಲದ ಕಹಳೆ ಊದಲು ಆರಂಭಿಸಿದೆ.

ಇದು ಎಷ್ಟರ ಮಟ್ಟಿಗೆ ಫಲಕೊಡುತ್ತದೆಯೋ ಗೊತ್ತಿಲ್ಲ. ಆದರೆ ಕ್ರಾಂಗ್ರೆಸ್ ಕ್ಷೇತ್ರಗಳಲ್ಲಿ ಪಕ್ಷದ ಸಮಾವೇಶ, ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕಿಳಿದಿರುವುದು ಎದ್ದು ಕಾಣಿಸುತ್ತಿದೆ. ಒಂದೆಡೆ ಕಾಂಗ್ರೆಸ್ ತಮಗೆ ಸಿಕ್ಕ ಅಸ್ತ್ರಗಳನ್ನೆಲ್ಲಾ ಬಳಸಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದ್ದರೆ, ಆ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಾ ಬರುತ್ತಿದ್ದಾರೆ.

ಲಂಚ ಪಡೆದ ಹಗರಣದಲ್ಲಿ ಬಿಜೆಪಿಯ ಶಾಸಕ ವಿರುಪಾಕ್ಷಪ್ಪ ಮಾಡಾಳ್ ಸಿಕ್ಕಿಬಿದ್ದಿದ್ದು ಲೋಕಾಯುಕ್ತ ಅವರ ಅಕ್ರಮದ ಬಗ್ಗೆ ಜಾಲಾಡುತ್ತಿದೆ. ಈ ಹಗರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನದಲ್ಲಿದೆ. ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮುಂದುವರೆಸಿದ್ದಾರೆ.

ಕಾಂಗ್ರೆಸ್‌ನ ಭದ್ರಕೋಟೆಗೆ ಬಿಜೆಪಿ ಲಗ್ಗೆ

ಕಾಂಗ್ರೆಸ್‌ನ ಭದ್ರಕೋಟೆಗೆ ಬಿಜೆಪಿ ಲಗ್ಗೆ

ಈ ಮಧ್ಯ ಮೈಸೂರು ಜಿಲ್ಲೆಯ ಕಾಂಗ್ರೆಸ್ ಭದ್ರ ಕೋಟೆ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಭರ್ಜರಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿರುವುದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಅಲ್ಪ ಸಂಖ್ಯಾತರೇ ಹೆಚ್ಚಿರುವ ನರಸಿಂಹರಾಜ(ಎನ್ ಆರ್) ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನ್ನುವುದಕ್ಕಿಂತಲೂ ಶಾಸಕ ತನ್ವೀರ್ ಸೇಠ್ ಅವರ ಪ್ರಾಬಲ್ಯದ ಕ್ಷೇತ್ರ ಎಂದರೆ ತಪ್ಪಾಗಲಾರದು. ತಂದೆ ಕಾಲದಿಂದಲೂ ಪ್ರತಿನಿಧಿಸಿಕೊಂಡು ಬಂದಿರುವ ತನ್ವೀರ್ ಸೇಠ್ ಅವರು ಈ ಬಾರಿ ರಾಜಕೀಯದಿಂದ ದೂರ ಉಳಿಯುವ ಮಾತುಗಳನ್ನು ಆಡಿರುವುದು ಬಿಜೆಪಿಗೆ ಬೂಸ್ಟರ್ ಡೋಸ್ ಸಿಕ್ಕಂತಾಗಿದೆ.

ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ನರಸಿಂಹರಾಜ(ಎನ್‍ ಆರ್) ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿರುವ ಬಿಜೆಪಿ ನಾಯಕರು ಕ್ಷೇತ್ರದ ನಾಯ್ಡು ನಗರದಲ್ಲಿನ ಪ್ರಸನ್ನ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋ ನಡೆಸಿದ್ದು, ನಂತರ ಮುಖ್ಯ ರಸ್ತೆ ಮೂಲಕ ಕುರಿಮಂಡಿ ವೃತ್ತ, ಗಾಯತ್ರಿ ರಾಮಮಂದಿರ ವೃತ್ತ, ರಾಜೇಂದ್ರ ನಗರದ ಮುಖ್ಯರಸ್ತೆ ಮೂಲಕ ರಾಜೇಂದ್ರ ನಗರದ ವೃತ್ತದಲ್ಲಿ ಮುಕ್ತಾಯಗೊಳಿಸಿದ್ದಾರೆ.

ಜೊತೆಗೆ ರಾಜೇಂದ್ರ ನಗರದ ವೃತ್ತದಲ್ಲಿ ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಚೇರಿ ಉದ್ಘಾಟಿಸಿದ್ದಾರೆ. ಆ ಮೂಲಕ ಎನ್ ಆರ್ ಕ್ಷೇತ್ರದಲ್ಲಿ ಕಮಲವನ್ನು ಅರಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ನರಸಿಂಹರಾಜ ಎನ್ನುವುದು ಮಹಾರಾಜರ ಹೆಸರು ಹೊಂದಿರುವ ಕ್ಷೇತ್ರವಾಗಿದೆ. ಆದ್ದರಿಂದ ಮಹಾರಾಜರು ಆರಾಧಿಸುವ ಶ್ರೀ ಚಾಮುಂಡೇಶ್ವರಿ ತಾಯಿಯ ಭಕ್ತರು ಮಾತ್ರ ಈ ಕ್ಷೇತ್ರದಲ್ಲಿ ಗೆಲ್ಲಬೇಕು ಎಂಬ ಮಾತುಗಳನ್ನಾಡುವ ಮೂಲಕ ಸಂಸದ ಪ್ರತಾಪ್ ಸಿಂಹ ಭಾವನಾತ್ಮಕ ದಾಳ ಎಸೆದಿದ್ದಾರೆ.

 ಪೌರಕಾರ್ಮಿಕ ಮುಖಂಡರ ಮನೆಯಲ್ಲಿ ಉಪಹಾರ

ಪೌರಕಾರ್ಮಿಕ ಮುಖಂಡರ ಮನೆಯಲ್ಲಿ ಉಪಹಾರ

ನಗರದ ಕ್ಯಾತಮಾರನಹಳ್ಳಿಯ ಹುಲಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಆ ನಂತರ ಎಫ್‌ಟಿಎಸ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹೂಮಾಲೆ ಹಾಕಿ ಅಲ್ಲಿಂದ ಜ್ಯೋತಿನಗರದ ಎಂಸಿಸಿ ಕಾಲೋನಿ (ಪೌರ ಕಾರ್ಮಿಕರ ಕಾಲೋನಿ)ಗೆ ಭೇಟಿ ನೀಡಿದ ಬಿಜೆಪಿ ನಾಯಕರು, ಶ್ರೀ ದೇವಿ ಪಟ್ಟಲ್ಲಮ್ಮ ಮತ್ತು ಶ್ರೀ ಕತ್ತಿ ಮುನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಪೌರಕಾರ್ಮಿಕ ಮುಖಂಡ ಸುಬ್ರಮಣಿ ಮನೆಯಲ್ಲಿ ಪೌರ ಕಾರ್ಮಿಕರ ಜೊತೆಗೆ ಉಪಹಾರ ಸೇವಿಸಿದ್ದಾರೆ.

ಎನ್.ಆರ್. ಕ್ಷೇತ್ರದಲ್ಲಿ ಬಲವಾದ ಎಸ್‌ಡಿಪಿಐ

ಎನ್.ಆರ್. ಕ್ಷೇತ್ರದಲ್ಲಿ ಬಲವಾದ ಎಸ್‌ಡಿಪಿಐ

ಕಾಂಗ್ರೆಸ್‌ ಓಟ್ ಬ್ಯಾಂಕ್ ಮುಖ್ಯವಾಗಿ ಅಲ್ಪ ಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರಾಗಿದ್ದು, ದಲಿತರು ಮತ್ತು ಹಿಂದುಳಿದ ವರ್ಗದ ಮತದಾರರನ್ನು ಸೆಳೆದರೆ ಸುಲಭವಾಗಿ ಕಾಂಗ್ರೆಸ್‌ನ್ನು ಕಟ್ಟಿಹಾಕಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಹೀಗಾಗಿಯೇ ಬಿಜೆಪಿ ಹೊಸ ತಂತ್ರ ಹೂಡಿದೆ.

ಎನ್.ಆರ್. ಕ್ಷೇತ್ರದ ಮಟ್ಟಿಗೆ ಇದು ಎಷ್ಟು ಲಾಭ ತಂದುಕೊಡುತ್ತೋ ಗೊತ್ತಿಲ್ಲ. ಆದರೆ ಕ್ಷೇತ್ರದಲ್ಲಿ ಎಸ್‌ಡಿಪಿಐ ಪ್ರಬಲವಾಗುತ್ತಿರುವುದರಿಂದ ಅಲ್ಪ ಸಂಖ್ಯಾತರ ಮತಗಳು ಎಸ್‌ಡಿಪಿಐ ಪಾಲಾದರೆ ಅದರ ಪರಿಣಾಮಗಳು ಕಾಂಗ್ರೆಸ್ ಮೇಲೆ ಬೀರಲಿದೆ. ಇದರ ಲಾಭವನ್ನು ಬಿಜೆಪಿ ಸುಲಭವಾಗಿ ಪಡೆಯಬಹುದು ಎಂಬುದು ನಾಯಕರ ಲೆಕ್ಕಾಚಾರವಿರಬಹುದೇನೋ..?

ರಾಜಕೀಯ ಜಿದ್ದಾಜಿದ್ದಿಯ ವೇದಿಕೆಯಾದ ನರಸಿಂಹರಾಜ ಕ್ಷೇತ್ರ

ರಾಜಕೀಯ ಜಿದ್ದಾಜಿದ್ದಿಯ ವೇದಿಕೆಯಾದ ನರಸಿಂಹರಾಜ ಕ್ಷೇತ್ರ

ಹಾಲಿ ಶಾಸಕ ತನ್ವೀರ್ ಸೇಠ್ ಅವರು ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರು ಹಲವು ವರ್ಷಗಳಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಇದು ಕಾಂಗ್ರೆಸ್‌ಗೆ ಫ್ಲಸ್ ಪಾಯಿಂಟ್ ಆಗಿದೆ. ಆದರೆ ಅವರು ರಾಜಕೀಯ ವಿಶ್ರಾಂತಿ ಘೋಷಿಸಿದರೆ ಕಾಂಗ್ರೆಸ್‌ಗೆ ಕಷ್ಟವಾಗುವುದಂತೂ ಖಚಿತವಾಗಿದೆ.

ಒಟ್ಟಾರೆ ಕ್ಷೇತ್ರದ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿರುವ ಬಿಜೆಪಿ ನಾಯಕರು ಹೊಸ ತಂತ್ರಗಳನ್ನು ಆರಂಭಿಸಿದ್ದಾರೆ. ಇದು ಈ ಬಾರಿಯೇ ಫಲಕೊಡುತ್ತೋ ಗೊತ್ತಿಲ್ಲ. ಆದರೆ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗುವುದಂತೂ ಖಚಿತವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+