ಮೈಸೂರಿನ ಬಂದಂತಮ್ಮ ದೇವಸ್ಥಾನದಲ್ಲಿ ಲಕ್ಷಾಂತರ ರೂ.ದೋಚಿದ ಕಳ್ಳರು
ಮೈಸೂರು, ಜನವರಿ 29: ಮೈಸೂರಿನ ಪ್ರತಿಷ್ಠಿತ ಬಂದಂತಮ್ಮ ದೇವಾಲಯಕ್ಕೆ ನುಗ್ಗಿದ ಕಳ್ಳರು ರಾತ್ರಿ ಪಾಳಯದಲ್ಲಿ ಕಾರ್ಯನಿವರ್ಹಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಕಟ್ಟಿಹಾಕಿ ದೇವಸ್ಥಾನದಲ್ಲಿ ಹುಂಡಿಯನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ.
ಮೈಸೂರಿನ ಕುವೆಂಪು ನಗರದಲ್ಲಿರುವ ಬಂದಂತಮ್ಮ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮೇನ್ ಡೋರ್ ನ ಮೂಲಕವೇ ದೇವಾಲಯ ಪ್ರವೇಶ ಮಾಡಿರುವ ಕಳ್ಳರು ಸೆಕ್ಯೂರಿಟಿ ಗಾರ್ಡ್ ನನ್ನು ಕಟ್ಟಿಹಾಕಿ ದೇವಾಲಯದ ಹುಂಡಿಯನ್ನು ಲೂಟಿ ಮಾಡಿದ್ದಾರೆ. ದೇವರ ತಾಳಿಯನ್ನೂ ಬಿಡದ ಖದೀಮರು ಸುಮಾರು ಲಕ್ಷಾಂತರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.

ದೇವಾಲಯದ ಸುತ್ತ ಸಿಸಿ ಟಿವಿ ಇದ್ದರೂ ಕಳ್ಳರು ಕೈಚಳಕ ತೋರಿದ್ದು, ಸ್ಥಳಕ್ಕೆ ಕುವೆಂಪುನಗರ ಠಾಣಾ ಪೊಲೀಸರು ಭೇಟಿ ನೀಡಿ, ದೇವಾಲಯದ ಬಾಗಿಲು ಹಾಕಿ ಸಿಸಿ ಟಿವಿ ಫುಟೇಜ್ ಪರಿಶೀಲನೆ ನಡೆಸಿದ್ದಾರೆ. ಇನ್ನು ನಿರ್ಜನ ಪ್ರದೇಶದಲ್ಲಿ ಈ ದೇವಸ್ಥಾನವಿಲ್ಲ. ಯಾವಾಗಲೂ ಗಿಜಿಗುಡುತ್ತಿರುವ ಈ ರಸ್ತೆಯಲ್ಲೇ ಕಳ್ಳರು ತಮ್ಮ ಕೈಚಳಕ ತೋರಿದ್ದು ಅಕ್ಕ - ಪಕ್ಕದ ಅಂಗಡಿ ಮಾಲೀಕರ ನಿದ್ದೆಗಡಿಸುವಂತೆ ಮಾಡಿದೆ.











Click it and Unblock the Notifications