ನ.9ರ ಬಳಿಕ ಮೈತ್ರಿ ಸರ್ಕಾರ ಪತನ : ಮೈಸೂರಿನ ಗುರೂಜಿ ಭವಿಷ್ಯ!
Recommended Video

ಮೈಸೂರು, ಸೆಪ್ಟೆಂಬರ್.16: ನವೆಂಬರ್ 9 ರ ನಂತರ ಕುಮಾರಸ್ವಾಮಿ ಸರ್ಕಾರ ಪತನವಾಗಲಿದೆ. ಜೆಡಿಎಸ್ - ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಮುಂದುವರೆಯವುದಿಲ್ಲ ಎಂದು ಅರ್ಜುನ್ ಅವಧೂತ ಗುರೂಜಿ ಹೇಳಿದ್ದಾರೆ.
ಮೈಸೂರಿನಲ್ಲಿರುವ ಗುರೂಜಿ ಆಶ್ರಮಕ್ಕೆ ಯಡಿಯೂರಪ್ಪ ಭೇಟಿ ಕೊಟ್ಟ ಸಂದರ್ಭದಲ್ಲಿ ಗುರೂಜಿ ಈ ಮಾತುಗಳನ್ನು ನುಡಿದಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಯಡಿಯೂರಪ್ಪ ಕೆಲ ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯ ರಾಜಕಾರಣ, ರಾಜಕೀಯ ವಿದ್ಯಾಮಾನ, ರಾಜ್ಯದ ಹಾಗು ಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ಹಾಸನದ ಕೋಡಿ ಮಠ ಶೀಗಳು ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದರು.

ಈ ಕುರಿತು ಮಾಧ್ಯಮಗಳಿಗೆ ತಮ್ಮ ಭವಿಷ್ಯವನ್ನು ಹೇಳಿದ್ದ ಕೋಡಿ ಮಠ ಶ್ರೀಗಳು, ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕ ಒದಗಿ ಬರಲಿದೆ. ಬೆಳಗಾವಿ ಜಾರಕಿಹೋಳಿ ಸಹೋದರರ ಬಳಿಕ ಸರ್ಕಾರಕ್ಕೆ ಮತ್ತೋರ್ವ ಸಹೋದರು ಕಂಟಕವಾಗಲಿದ್ದಾರೆ.
ಮುಂಬರುವ ನವೆಂಬರ್ ವರೆಗೆ ರಾಜಕೀಯ ವಿಪ್ಲವ ಮುಂದುವರೆಯಲಿದೆ. ದೇಶದಲ್ಲಿ ಪ್ರಾಕೃತಿಕ ವಿಕೋಪ ಮುಂದುವರೆಯಲಿದೆ. ಭೂ ಕಂಪನದ, ಜೊತೆಗೆ ದೊಡ್ಡ ದೊಡ್ಡ ನಗರಗಳೂ ಕಂಪಿಸಲಿವೆ. ಸಾವು ನೋವುಗಳ ಸರಣಿ ಮುಂದುವರೆಯಲಿದೆ ಎಂದು ಕೋಡಿ ಮಠ ಶ್ರೀಗಳು ಭವಿಷ್ಯ ನುಡಿದಿದ್ದರು.












Click it and Unblock the Notifications