ಮೈಸೂರು ಜೆಡಿಎಸ್ ಪಾಳಯದಲ್ಲಿ ನಿಲ್ಲದ ಶಾಸಕರ ಮುನಿಸು!

ಮೈಸೂರು, ಮಾರ್ಚ್ 14; ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಕಳೆದುಕೊಳ್ಳುತ್ತಿದೆಯೇ?. ಮೈಸೂರು ಭಾಗದ ದಳಪತಿಗಳ ನಡುವಿನ ತಳಮಳ ಮತ್ತಷ್ಟು ಉಲ್ಬಣಗೊಂಡಿದೆ.

ಪಕ್ಷದ ವರಿಷ್ಠರಿಗೆ ಈಗಾಗಲೇ ಸೆಡ್ಡುಹೊಡೆದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ, ಪಕ್ಷದ ಎಲ್ಲಾ ಸಭೆಗಳು, ಸಮಾರಂಭಗಳಿಂದ ದೂರವೇ ಉಳಿದಿದ್ದಾರೆ. ಈಗ ಮೈಸೂರು ಭಾಗದ ಮತ್ತೋರ್ವ ಜೆಡಿಎಸ್ ಶಾಸಕ ಪಕ್ಷದಿಂದ ವಿಮುಖರಾದಂತಿದೆ.

ಜೆಡಿಎಸ್ ಭದ್ರ ಕೋಟೆಯಂತಿದ್ದ ಜಿಲ್ಲೆಯಲ್ಲಿ ಪ್ರಮುಖ ನಾಯಕರು ಪಕ್ಷದಿಂದ ದೂರವಾಗುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಜೆಡಿಎಸ್ ಶಾಸಕ ಕೆ. ಮಹದೇವ್ ಕೂಡ ಜಿ. ಟಿ. ದೇವೇಗೌಡರ ಹಾದಿ ಹಿಡಿದಂತಿದೆ, ಇದರಿಂದಾಗಿ ಪಕ್ಷದಲ್ಲಿ ಎಲ್ಲರೂ ಸರಿ ಇಲ್ಲವೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

2018ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿಸಿದ್ದ ಜಿ. ಟಿ. ದೇವೇಗೌಡರು ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಪಕ್ಷದಿಂದ ದೂರವಾಗಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಅವರು ರಾಜಕೀಯವಾಗಿ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಶಾಸಕ ಕೆ. ಮಹದೇವ್

ಶಾಸಕ ಕೆ. ಮಹದೇವ್

ಮೈಸೂರು ಭಾಗದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದ ಶಾಸಕ ಜಿ. ಟಿ. ದೇವೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಜೆಡಿಎಸ್ ಶಾಸಕ ಕೆ. ಮಹದೇವ್ ಕೂಡ ಈಗ ಜಿ. ಟಿ. ದೇವೇಗೌಡರ ಹಾದಿಯಲ್ಲಿ ಹೆಜ್ಜೆ ಹಾಕಲು ಸಿದ್ಧರಾಗುತ್ತಿದ್ದಾರೆ ಎಂಬ ಸೂಚನೆ ಸಿಕ್ಕಿದೆ.

ಪುತ್ರನನ್ನು ಕಣಕ್ಕಿಳಿಸಿದ ಶಾಸಕ

ಪುತ್ರನನ್ನು ಕಣಕ್ಕಿಳಿಸಿದ ಶಾಸಕ

ಜೆಡಿಎಸ್ ವಿರುದ್ಧ ಸಿಡಿದೆದ್ದಿರುವ ಶಾಸಕ ಮಹದೇವ್ ಮೈಮುಲ್ ಚುನಾವಣೆಯಲ್ಲಿ ಜೆಡಿಎಸ್ ಸಿಂಡಿಕೇಟ್ ವಿರುದ್ಧವೇ ತಮ್ಮ ಪುತ್ರನನ್ನು ‌ಕಣಕ್ಕಿಳಿಸಿದ್ದಾರೆ. ಆ ಮೂಲಕ ಪಕ್ಷದ ವರಿಷ್ಠರಿಗೆ ಟಾಂಗ್ ನೀಡಿದ್ದಾರೆ. ಮಹದೇವ್ ನಡೆಗೆ ತೀವ್ರವಾಗಿ ಆಕ್ರೋಶಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಮ್ಮದೇ ಪಕ್ಷದ ಶಾಸಕನ ಮಗನ ವಿರುದ್ಧ ಪ್ರಚಾರ ನಡೆಸಿದ್ದಾರೆ.

ಹೊಸ ಮುಖಗಳ ಹುಡುಕಾಟ

ಹೊಸ ಮುಖಗಳ ಹುಡುಕಾಟ

ಶಾಸಕ ಮಹದೇವ್ ಕೂಡ ಜಿ. ಟಿ. ದೇವೇಗೌಡರ ಹಾದಿ ಹಿಡಿದಿರುವ ಕಾರಣ ಮೈಸೂರು ಭಾಗದಲ್ಲಿ ಹೊಸಮುಖಗಳ ಹುಡುಕಾಟಕ್ಕೆ ಎಚ್. ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಸದ್ಯ ಜಿಲ್ಲೆಯ ಜೆಡಿಎಸ್ ಸುಪ್ರೀಂ ಎಂದೇ ಬಿಂಬಿತವಾಗಿರುವ ಶಾಸಕ ಸಾ. ರಾ. ಮಹೇಶ್, ಪಕ್ಷ ಸಂಘಟನೆ ಹಾಗೂ ಪಕ್ಷವನ್ನು ಮುನ್ನಡೆಸುವ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ.

ಇಬ್ಭಾಗವಾಗಲಿದೆ ಜೆಡಿಎಸ್?

ಇಬ್ಭಾಗವಾಗಲಿದೆ ಜೆಡಿಎಸ್?

ಮಾರ್ಚ್ 16ರಂದು ಬೆಳಗ್ಗೆ 8 ರಿಂದ ಸಂಜೆ 4ರ ತನಕ ಮೈಮುಲ್ ಚುನಾವಣೆಗೆ ಮತದಾನ ನಡೆಯಲಿದೆ. ಅಂದು ಸಂಜೆ 5ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 1104 ಸೊಸೈಟಿಗಳಿಂದ 1030 ಮಂದಿ ಮತ ಚಲಾವಣೆ ಮಾಡಲಿದ್ದಾರೆ.

ಪಕ್ಷದ ಹಿರಿಯ ಶಾಸಕರ ಮನಸ್ಥಾಪ ಸದ್ಯದ ಮಟ್ಟಿಗೆ ಬೂದಿ ಮುಚ್ಚಿದ ಕೆಂಡದಂತಿದೆ.ಮೈಮುಲ್ ಚುನಾವಣೆ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್ ಇಬ್ಬಾಗವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+