ಅಂಗನವಾಡಿ ಆಹಾರ ಪಕ್ಕದ ಮನೆ ಸ್ನಾನದ ಕೋಣೆಯಲ್ಲಿ!
ಮೈಸೂರು, ಜ. 22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಅಕ್ಕಿಗಳು ಕಾಳಸಂತೆಯಲ್ಲಿ ಮಾರಾಟವಾದ ಪ್ರಕರಣಗಳು ಈಗಾಗಲೇ ಬಯಲಿಗೆ ಬಂದಿವೆ. ಭ್ರಷ್ಟ ಮನಸ್ಥಿತಿಯವರು ಮಕ್ಕಳ ಆಹಾರವನ್ನೂ ಬಿಡುವುದಿಲ್ಲ ಎಂಬುದಕ್ಕೆ ಮೈಸೂರಿನಲ್ಲಿ ಬಯಲಿಗೆ ಬಂದಿರುವ ವಂಚನೆಯೇ ಸಾಕ್ಷಿ.
ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಏಕಲವ್ಯ ನಗರದಲ್ಲಿ ಅಂಗನವಾಡಿ ಮಕ್ಕಳಿಗೆ ನೀಡಲೆಂದು ಪೂರೈಕೆ ಮಾಡಿದ್ದ ಆಹಾರವನ್ನು ಅಂಗನವಾಡಿಯ ಪಕ್ಕದ ಮನೆಯಲ್ಲಿ ಸಂಗ್ರಹಿಸಿದ್ದ ಪ್ರಕರಣ ಬಯಲಾಗಿದೆ. [80 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ]

ಏನೇನು ಸಿಕ್ಕಿದೆ? : ಅಂಗನವಾಡಿ ಪಕ್ಕದ ಮನೆಯಲ್ಲಿನ ಸ್ನಾನದ ಕೋಣೆಯಲ್ಲಿ 60 ಕೆಜಿ ಅಕ್ಕಿ, 40 ಕೆಜಿ ಗೋಧಿ, 7 ಕೆಜಿ ದ್ವಿದಳ ಧಾನ್ಯಗಳು, ಬೆಲ್ಲ, ಸಾಂಬಾರ ಪದಾರ್ಥಗಳು, 22 ಪ್ಯಾಕೆಟ್ ಹಾಲಿನ ಪುಡಿ ಸೇರಿದಂತೆ ಇತರ ಆಹಾರ ಪದಾರ್ಥಗಳು ಕಂಡುಬಂದಿವೆ. ಈ ಎಲ್ಲ ಆಹಾರಗಳ ಮೇಲೆ ಅಂಗನವಾಡಿ ಕೇಂದ್ರದ ಸೀಲ್ ಕಂಡುಬಂದಿದೆ. [ಅನ್ನಭಾಗ್ಯದಿಂದ ಸ್ವಾವಲಂಬಿಯಾದ ವಿಕಲಚೇತನ]
ಅಂಗನವಾಡಿ ಮೇಲ್ವಿಚಾರಕಿ ನಿರ್ಮಲಾ ಕುಮಾರಿ ಸಮ್ಮುಖದಲ್ಲಿಯೇ ಮನೆಯನ್ನು ಶೋಧಿಸಲಾಗಿದೆ. ಅಂಗನವಾಡಿಯ ಶಿಕ್ಷಕಿ ಹಾಗೂ ಸಹಾಯಕಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಇಬ್ಬರಿಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. [ದುಬೈ ಕುರಿಗಾಹಿ ಹುಟ್ಟೂರಿಗೆ ಬಂದ]












Click it and Unblock the Notifications