ಅಲ್‌ಖೈದಾ ವಿಡಿಯೋ ತುಣುಕು : ನಿಖರತೆ ಪರಿಶೀಲಿಸಲು ಸಿಎಂ ಸೂಚನೆ
ಮೈಸೂರು : ಏಪ್ರಿಲ್ 07: ಉಗ್ರಸಂಘಟನೆ ಆಲ್‌ಖೈದಾ ವಿಡಿಯೋ ತುಣುಕಿನ ನಿಖರತೆ ಬಗ್ಗೆ ಪರಿಶೀಲಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅವರು ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಹಿಜಾಬ್ ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ದೇಶ, ರಾಜ್ಯದ ಕಾನೂನಿನ ವಿರುದ್ಧ ಅನಾವಶ್ಯಕವಾಗಿ ಹಲವಾರು ವಿಷಯಗಳನ್ನು ಪ್ರಾರಂಭ ಮಾಡಿ ಜನರಲ್ಲಿ ಆಶಾಂತಿ ಗೊಂದಲವನ್ನು ಮೂಡಿಸುವ ಶಕ್ತಿಯ ಹಿಂದಿನಿಂದಲೂ ಕೆಲಸ ಮಾಡುತ್ತಾ ಬಂದಿದೆ. ಅದರ ಭಾಗವಾಗಿ ಅಲ್ ಖೈದಾ ದಿಂದ ಎಂದು ಹೇಳಿಕೊಂಡಿರುವ ವಿಡಿಯೋ ತುಣುಕಿನಲ್ಲಿ ಅವರ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಿಪಡಿಸಿದ್ದಾರೆ ಎಂದರು.

ಅಲ್ ಖೈದಾ ಹೇಳಿಕೆ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ , ಅವರ ಮಾತಿಗೆ ಯಾವುದೇ ತರ್ಕ ಹಾಗೂ ಆಧಾರ ಇಲ್ಲ. ಅಲ್ ಖೈದಾ ಹೇಳಿಕೆ ಬಹಿರಂಗವಾದರೆ ಸಿದ್ಧರಾಮಯ್ಯ ಅವರು ಗಲಿಬಿಲಿ ಆಗುತ್ತಿರುವುದೇಕೆ ಎನ್ನುವ ಮೂಲಭೂತ ಪ್ರಶ್ನೆ ಉದ್ಭವಿಸುತ್ತಿದೆ ಎಂದರು.












Click it and Unblock the Notifications