1,001 ಮೆಟ್ಟಿಲೇರಿ ಚಾಮುಂಡಿ ತಾಯಿಯ ದರ್ಶನ ಪಡೆದ ನಟಿ ಹರಿಪ್ರಿಯಾ
Recommended Video

ಮೈಸೂರು, ಅಕ್ಟೋಬರ್. 16: ನಾಡಹಬ್ಬ ದಸರೆ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿರುವ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಇಂದು ಮಂಗಳವಾರ (ಅ.16) ಬೆಳಗ್ಗೆ ಚಾಮುಂಡಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದಿದ್ದಾರೆ. ಈಗಾಗಲೇ ಹಲವು ನಟರು ಮೈಸೂರಿಗೆ ಬಂದಾಗ ಚಾಮುಂಡಿ ತಾಯಿಯ ದರ್ಶನ ಮಾಡಲು ಮೆಟ್ಟಿಲುಗಳ ಮೂಲಕ ಬಂದಿದ್ದಾರೆ.
ಈಗ ನಟಿ ಹರಿಪ್ರಿಯಾ ಸಹ ಮೆಟ್ಟಿಲು ಏರಿ ದೇವಿಯ ದರ್ಶನ ಮಾಡಿದ್ದಾರೆ. ಯುವದಸರಾ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿದ್ದ ನಟಿ ಹರಿಪ್ರಿಯಾ ಚಾಮುಂಡಿಬೆಟ್ಟದ ತಪ್ಪಲಿನಿಂದ 1,001 ಮೆಟ್ಟಿಲುಗಳನ್ನ ಹತ್ತಿ ತಾಯಿಯ ದರ್ಶನ ಪಡೆದರು.
ಇದೇ ವೇಳೆ ಮಾತನಾಡಿದ ಅವರು, ನಾನು ಎರಡನೇ ಬಾರಿ ಬೆಟ್ಟವನ್ನು ಹತ್ತಿದ್ದೇನೆ. ಮೈಸೂರೆಂದರೆ ನನಗೆ ಇಷ್ಟದ ಊರು. ಬೆಟ್ಟ ಹತ್ತುವುದೆಂದರೆ ನನಗೆ ತುಂಬಾ ಇಷ್ಟ ಎಂದರು.

ದಸರಾ ಮಹೋತ್ಸವ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಯಶಸ್ವಿಯಾಗಿ ಮುಂದುವರಿದಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಹರಿಪ್ರಿಯ ನೃತ್ಯ ಎಲ್ಲರ ಗಮನ ಸೆಳೆಯಿತು. ನೀರ್ ದೋಸೆ.. ಗೀತೆಗೆ ಹರಿಪ್ರಿಯ ಹೆಜ್ಜೆ ಹಾಕುತ್ತಿದ್ದಂತೆ ಇತ್ತ ಯುವ ಸಮೂಹ ಕುಣಿದು ಕುಪ್ಪಳಿಸಿತು.











Click it and Unblock the Notifications