ಬಚ್ಚಿಡಲಾಗಿದ್ದ ದರ್ಶನ್ ಕಾರು ಶ್ರೀರಂಗಪಟ್ಟಣದಲ್ಲಿ ಪತ್ತೆ: ಅಧಿಕಾರಿಗಳಿಂದ ಪರಿಶೀಲನೆ
ಮೈಸೂರು, ಸೆಪ್ಟೆಂಬರ್.24 : ಅಪಘಾತಕ್ಕೀಡಾದ ದರ್ಶನ್ ಕಾರನ್ನು ಇದೀಗ ನಗರದ ವಿವಿ ಪುರಂ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪಘಾತದ ಬಳಿಕ ಕಾರನ್ನು ದರ್ಶನ್ ಸ್ನೇಹಿತರು ಏಕಾಏಕಿ ಶ್ರೀರಂಗಪಟ್ಟಣದ ಬಳಿಯ ಸ್ನೇಹಿತನ ತೋಟದಲ್ಲಿ ಬಚ್ಚಿಟ್ಟಿದ್ದರು ಎನ್ನಲಾಗಿದೆ. ಈ ನಡುವೆ ಪ್ರಕರಣದ ಬೆನ್ನಟ್ಟಿದ ವಿವಿ ಪುರಂ ಸಂಚಾರಿ ಠಾಣೆ ಪೊಲೀಸರು ಕಾರು ಇರುವ ಸ್ಥಳ ಪತ್ತೆ ಹಚ್ಚಿದ್ದು, ಸದ್ಯ ವಶಕ್ಕೆ ಪಡೆದಿದ್ದಾರೆ.
ಕಾರು ಇರುವ ಸ್ಥಳಕ್ಕೆ ಆರ್ ಟಿಓ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿಗೆ ನಂಬರ್ ರಿಜಿಸ್ಟರ್ ಆಗಿದೆಯೇ? ಇನ್ಸೂರೆನ್ಸ್ ಮಾಡಿಸಲಾಗಿದೆಯಾ ಎಂದು ತಪಾಸಣೆ ನಡೆಸುತ್ತಿದ್ದಾರೆ.

ಅಪಘಾತ ನಡೆದ ಸ್ಥಳ ವಿವಿ ಪುರಂ ಸಂಚಾರಿ ಠಾಣೆ ವ್ಯಾಪ್ತಿಗೆ ಸೇರಿತ್ತು. ಅಪಘಾತವಾದ ಬಳಿಕ ಕಾರನ್ನು ದರ್ಶನ್ ಸ್ನೇಹಿತರು ತೋಟದಲ್ಲಿ ಬಚ್ಚಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಅಷ್ಟೇ ಅಲ್ಲ, ದರ್ಶನ್ ಅವರ ಆಡಿ ಕ್ಯೂ7 ಕಾರು ಏಕಾಏಕಿ ನಾಪತ್ತೆಯಾಗಿದ್ದು ಅಚ್ಚರಿ ಮೂಡಿಸಿತ್ತು. ಕಾರು ಎಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ನಂತರ ಕಾರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು.
ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.?
ಅಷ್ಟರಲ್ಲೇ ಕಾರು ದರ್ಶನ್ ಸ್ನೇಹಿತನ ತೋಟದ ಮನೆಯಲ್ಲಿ ಸಿಕ್ಕಿದೆ ಎಂದು ತಿಳಿದು ಬಂದಿರುವುದು ಮತ್ತಷ್ಟು ಗೊಂದಲವುಂಟು ಮಾಡಿದೆ. ಸದ್ಯದಲ್ಲೇ ಇದೆಲ್ಲದರ ಸ್ಪಷ್ಟ ಚಿತ್ರಣ ಸಿಗಲಿದೆ.












Click it and Unblock the Notifications