ಹಲ್ಲೆಯಲ್ಲಿ ಪರ್ಯವಸಾನವಾದ ದಂಪತಿ ಅನೈತಿಕ ಸಂಬಂಧ
ಮೈಸೂರು, ಡಿಸೆಂಬರ್, 03: ಮಹಿಳೆ ಜೊತೆಯ ಅನೈತಿಕ ಸಂಬಂಧ ಹಳಸಿದ್ದರಿಂದ ಆಕ್ರೋಶಗೊಂಡ ವ್ಯಕ್ತಿ ನಡುಬೀದಿಯಲ್ಲಿ ಆಕೆಗೆ ಮಚ್ಚಿನಿಂದ ಹಲ್ಲೆಮಾಡಿದ ಘಟನೆ ಹುಣಸೂರು ತಾಲೂಕಿನಲ್ಲಿ ಡಿಸೆಂಬರ್ 02ರ ಮಂಗಳವಾರ ನಡೆದಿದೆ.
ಮಲ್ಲಿಕಾರ್ಜುನ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಷಿಯರ್ ಆಗಿರುವ ದಾಸಪ್ಪ ಎಂಬಾತನೇ ಮಹಿಳೆ ಮತ್ತು ಆಕೆಯ ಪತಿ ಮೇಲೆ ಹಲ್ಲೆ ಮಾಡಿ ಪೊಲೀಸರ ಅತಿಥಿಯಾಗಿರುವ ಆರೋಪಿ. ಈತ ಹುಣಸೂರಿನ ಅಂಬೇಡ್ಕರ್ ಕಾಲೋನಿಯ ನಿವಾಸಿ.[ಮಹಿಳೆ ಮನೆಗೆ 'ಡ್ಯೂಟಿ' ಮಾಡಲು ಹೋಗಿ ಪ್ಯಾದೆ ಸಿಕ್ಕಿಬಿದ್ದ!]

ಮಹಿಳೆ ಮೇಲೆ ಹಲ್ಲೆ ಮಾಡಿದ್ದೇಕೆ?
ವರಲಕ್ಷ್ಮಿ ಹುಣಸೂರಿನ ನಲ್ಲೂರುಪಾಲ ಗ್ರಾಮದ ನಿವಾಸಿಯಾಗಿದ್ದು ಕೆ.ಆರ್.ನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಶಿವಣ್ಣನ ಜೊತೆ 10ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆ ಬಳಿಕ ತಾಯಿ ಮನೆಯಲ್ಲಿದ್ದಾಗ ಅಂಬೇಡ್ಕರ್ ಗ್ರಾಮದ ದಾಸಪ್ಪನ ಪರಿಚಯವಾಗಿ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು.
ಬಳಿಕ ದಾಸಪ್ಪ ವರಲಕ್ಷ್ಮಿಯಿಂದ ದೂರವಾಗಿ ಮತ್ತೊಬ್ಬಳೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು. ಆಕೆ ವರಲಕ್ಷ್ಮಿಗೆ ಸಂಬಂಧಿಕಳಾಗಿದ್ದಳು. ಈ ವಿಚಾರ ದಾಸಪ್ಪ ಮತ್ತು ವರಲಕ್ಷ್ಮಿ ನಡುವಿನ ಸಂಬಂಧ ಹಳಿಸಲು ಕಾರಣವಾಗಿತ್ತಲ್ಲದೇ, ದ್ವೇಷಕ್ಕೂ ಕಾರಣವಾಗಿತ್ತು.[ಪುಣೆಯಲ್ಲಿ ಪತ್ನಿ ರುಂಡ ಕತ್ತರಿಸಿ ರಸ್ತೆಗಿಳಿದ ಪತಿ]
ವರಲಕ್ಷ್ಮಿ ಮತ್ತು ಪತಿ ಶಿವಣ್ಣ ಬುಧವಾರ ಮಲ್ಲಿಕಾರ್ಜುನ ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಎದುರಾದ ದಾಸಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ನೆರವಿಗೆ ಧಾವಿಸಿದ್ದು, ಆರೋಪಿ ದಾಸಪ್ಪನನ್ನು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ. ಹಲ್ಲೆಗೊಳಗಾದ ವರಲಕ್ಷ್ಮಿ ಮತ್ತು ಶಿವಣ್ಣ ಹುಣಸೂರು ಸಾರ್ವಜನಿಕರ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications