ಮೇಲುಕೋಟೆ ದೇವಾಲಯದ ಕಲ್ಯಾಣಿಯಲ್ಲಿ ಮುಳುಗಿ ವ್ಯಕ್ತಿ ಸಾವು

ದೇವರ ದರ್ಶನಕ್ಕೆಂದು ತೆರಳಿದ್ದ ವ್ಯಕ್ತಿಯೊಬ್ಬ ದೇವಾಲಯದ ಎದುರಿಗಿನ ಕಲ್ಯಾಣಿಯಲ್ಲೇ ಬಿದ್ದು ಸಾವಿಗೀಡಾದ ಘಟನೆ ಮೇಲುಕೊಟೆ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆದಿದೆ.

ಮಂಡ್ಯ, ಏಪ್ರಿಲ್ 11: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವದ ತೀರ್ಥೋದ್ಭವದ ವೇಳೆ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೈಸೂರು ಮೂಲದ ರವಿ ಎಂಬಾತನೇ ಸಾವಿಗೀಡಾದ ದುರ್ದೈವಿ. ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವಕ್ಕೆ ಕುಟುಂಬ ಸಮೇತ ಬಂದಿದ್ದ ರವಿ, ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಾಡುವ ವೇಳೆ ಮುಳುಗಿದ್ದರು. ಬಳಿಕ ಕಲ್ಯಾಣಿಯಲ್ಲಿ ಅವಿರತ ಶೋಧ ನಡೆಸಲಾಗಿತ್ತಾದರೂ ಅವರ ಸುಳಿವು ಸಿಕ್ಕಿರಲಿಲ್ಲ. ಆದರೆ ದುರದೃಷ್ಟ ಎಂಬಂತೆ ಇದೀಗ ಅವರ ಶವ ನೀರಿನಿಂದ ಮೇಲಕ್ಕೆ ತೇಲಿ ಬಂದಿದೆ.[ಉಪಚುನಾವಣಾ ಅಂಗಳದಲ್ಲಿ ದೊಡ್ಡಜಾತ್ರಾ ಸಂಭ್ರಮ]

A man drowns and dies in Kalyani in Melukote

ದೇವರ ದರ್ಶನ ಪಡೆಯಲೆಂದು ಬಂದಿದ್ದ ಕುಟುಂಬದ ಆಕ್ರಂದನವೀಗ ಮುಗಿಲುಮುಟ್ಟಿದೆ. ಮೃತದೇಹವನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+