ಮೈಸೂರು: ಜೆಕೆ ಟೈರ್ ಕಾರ್ಖಾನೆಯ ಯಂತ್ರದೊಳಗೆ ಸಿಕ್ಕಿ ಕಾರ್ಮಿಕ ಸಾವು
ಮೈಸೂರು, ನವೆಂಬರ್ 16: ಮೈಸೂರಿನ ಪ್ರತಿಷ್ಠಿತ ಜೆಕೆ ಟಯರ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೈಸೂರು ಸುಣ್ಣದಕೇರಿ ನಿವಾಸಿ ರವಿ ಎಂಬುವವರು ಸಾವಿಗೀಡಾಗಿದ್ದಾರೆ.
ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮಶಿನ್ ನೊಳಗೆ ಸಿಲುಕಿ ಸಾವಿಗೀಡಾದ ಕಾರ್ಮಿಕನ ಶವವನ್ನು ಮಶಿನ್ ಬಿಚ್ಚಿ ತೆಗೆಯಲು ಸಾಧ್ಯವಿಲ್ಲದ ಕಾರಣ ತುಂಡರಿಸಿ ತೆಗೆಯಲಾಗುವುದೆಂದು ಅಧಿಕಾರಿಗಳ ಹೇಳಿದ್ದಾರೆ.

ದೇಶದಲ್ಲಿಯೇ ಪ್ರಸಿದ್ಧ ಟಯರ್ ಕಂಪನಿಯಲ್ಲಿ ಕಾರ್ಮಿಕರ ಸುರಕ್ಷತೆಯನ್ನು ನಿರ್ಲಕ್ಷ್ಯಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಕಾರ್ಖಾನೆಯಗನ್ನು ಮುಚ್ಚಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications