ಮೈಸೂರು:ರಸ್ತೆಯಲ್ಲೇ ಚಿರತೆ-ಮುಳ್ಳುಹಂದಿ ಓಡಾಟ, ಆತಂಕ
ಮೈಸೂರು, ಜನವರಿ 29: ಚಾಮುಂಡಿ ಬೆಟ್ಟದ ಮೇಲೆ ರೇಸ್ ಕೋರ್ಸ್ ಹಿಂಭಾಗದಲ್ಲಿ ಚಿರತೆ ಮತ್ತು ಮುಳ್ಳು ಹಂದಿ ರಸ್ತೆಯಲ್ಲಿ ಅಡ್ಡಾಡಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ರೇಸ್ ಕೋರ್ಸ್ ಹಿಂಬದಿಯ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದಕ್ಕೆ ಚಿರತೆ ಒಂದು ಅಡ್ಡ ಬರುತ್ತದೆ. ಸ್ವಲ್ಪ ದೂರ ಹೆಜ್ಜೆ ಹಾಕುತ್ತ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗುತ್ತದೆ. ಇದರ ಹಿಂದೆಯೇ ಮುಳ್ಳು ಹಂದಿಯೂ ಕಾಣಿಸಿಕೊಳ್ಳುತ್ತದೆ. ಕಾರಿನಲ್ಲಿ ಕುಳಿತಿದ್ದವರು ಈ ದೃಶ್ಯವನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ.
ವಿಡಿಯೋ ಬಗ್ಗೆ ನಿಖರ ಮಾಹಿತಿ ನೀಡಲು ಅಶಕ್ತರಾಗಿರುವ ಆರ್‌ಎಫ್‌ಒ ದೇವರಾಜು ಅವರು ಚಾಮುಂಡಿ ಬೆಟ್ಟದಲ್ಲಿ ನಾಲ್ಕು ಚಿರತೆಗಳಿವೆ ಆದರೆ ಅವು ಈ ವರೆಗೆ ಯಾರಿಗೂ ತೊಂದರೆ ಕೊಟ್ಟಿಲ್ಲ ಅಲ್ಲದೆ ಹೀಗೆ ಬೆಟ್ಟ ಬಿಟ್ಟು ಇಷ್ಟು ದೂರಕ್ಕೆ ಬಂದಿಲ್ಲ. ಮುಳ್ಳು ಹಂದಿಗಳೂ ಬೆಟ್ಟದಲ್ಲಿ ಸಾಕಷ್ಟಿವೆ ಆದರೆ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ರೇಸ್ ಕೋರ್ಸ್ ನ ಹಿಂಭಾಗದ ರಸ್ತೆ ಬಳಿ ತೆರಳಿ ಆ ಪ್ರದೇಶವೆಲ್ಲಾ ಪರಿಶೀಲನೆ ನಡೆಸಿದೆವು ಆದರೆ ಅಲ್ಲಿ ಯಾವುದೇ ಚಿರತೆ ಇರುವ ಬಗ್ಗೆ ಸುಳಿವು ಸಿಗಲಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications