ನಂಜನಗೂಡಿನಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟ 94 ಜೋಡಿ

ಮೈಸೂರು, ಆಗಸ್ಟ್ 10 : ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಲಾ ಮಂಟಪದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹದಲ್ಲಿ 94 ನವ ಜೋಡಿಗಳು ಸಪ್ತಪದಿ ತುಳಿಯುವ ಮೂಲಕ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶ್ರೀ ಕ್ರಾಂತಿಕಾರಿ ವೀರಶೈವ ಬಳಗವು ಡಾ. ಶ್ರೀ ಶಿವಕುಮಾರಸ್ವಾಮಿಗಳವರ 110 ನೇ ಜನ್ಮ ದಿನೋತ್ಸವದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪೌರಕಾರ್ಮಿಕ 2 ಜೋಡಿ, ಪರಿಶಿಷ್ಟ ಜಾತಿಯ 44 ಜೋಡಿ, ಪರಿಶಿಷ್ಟ ವರ್ಗದ 43 ಜೋಡಿ, ಅಂತರ್ಜಾತಿಯ 2 ಜೋಡಿ, ಮುಸ್ಲಿಂ ಸಮುದಾಯದ 1 ಜೋಡಿ, ಕ್ರಿಶ್ಛಿಯನ್ ಸಮುದಾಯದ 1 ಜೋಡಿ ಹಾಗೂ ಹುಟ್ಟು ಅಂದರಾದ 1 ವಿಕಲಚೇತನ ಜೋಡಿಗಳು ಸಪ್ತಪದಿ ತುಳಿದರು.

94 couples tied the knot in mass marriage ceremony at Nanjangud

ವರನಿಗೆ ಪಂಚೆ, ಶರ್ಟ್ ವಧುವಿಗೆ ಸೀರೆ ರವಿಕೆ, ಹಾಗೂ ಮಾಂಗಲ್ಯ ಬೆಳ್ಳಿ ಕಾಲುಂಗುರವನ್ನು ಉಚಿತವಾಗಿ ನೀಡಲಾಯಿತು.

ಮದುವೆಗೆ ಮುನ್ನ ಶ್ರೀ ಕಂಠೇಶ್ವರ ದೇವಾಲಯದ ಕಲಾಮಂದಿರದ ಆವರಣದಲ್ಲಿ ನವಗ್ರಹ ಪೂಜೆ, ಗಣಪತಿ ಹೋಮ, ಮತ್ತು ಕಂಕಣಧಾರಣೆ ಶಾಸ್ತ್ರ ಮತ್ತು ಮದುವೆ ಶಾಸ್ತ್ರಗಳನ್ನು ನೆರವೇರಿಸಿದ ಬಳಿಕ ಮಂತ್ರಗಳ ಪಠಣೆಯ ಜತೆಗೆ ಕಟ್ಟಿಮೇಳದ ಮೊಳಗುವಿಕೆಯೊಂದಿಗೆ ವರರಿಂದ ವಧುವಿಗೆ ಮಾಂಗಲ್ಯ ಧಾರಣೆಯನ್ನು ನಡೆಯಿತು.

94 couples tied the knot in mass marriage ceremony at Nanjangud

ಈ ಸಂದರ್ಭದಲ್ಲಿ ಜಗದ್ಗುರು ಸುತ್ತೂರು ಶಿವರಾತ್ರಿಶ್ವರ ದೇಶಿ ಕೇಂದ್ರ ಮಹಾಸ್ವಾಮಿಗಳು ಮತನಾಡಿ, 'ನವ ವಧುವರರು ನಿಷ್ಠೆಯಿಂದ ಜೀವನ ಪರಿಪಾಲನೆ ಮಾಡಬೇಕು, ಗಂಡ ಹೆಂಡತಿ ಅನ್ಯೂನ್ಯವಾಗಿ ಜೀವನ ನಡೆಸಿ' ಎಂದು ವಧುವರರಿಗೆ ಶುಭಹಾರೈಸಿದರು.

ನೂತನ ವಧು-ವರರಿಗೆ ವಿವಾಹದ ಪ್ರಮಾಣ ಪತ್ರವನ್ನು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ವಿತರಿಸಿದರು. ಈ ವೇಳೆ ಶಾಸಕ ಕಳಲೆ ಕೇಶವಮೂರ್ತಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+