ಮೈಸೂರು: 2 ದಿನದಲ್ಲಿ ಚೆಲುವಾಂಬ ಆಸ್ಪತ್ರೆಯಲ್ಲಿ 4 ಮಕ್ಕಳ ಸಾವು
ಮೈಸೂರು, ಸೆಪ್ಟೆಂಬರ್ 22: ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶುವೊಂದು ಮರಣ ಹೊಂದಿದ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ.
ಮಂಡ್ಯದ ಸಂತೋಷ್ ಎಂಬುವವರ ಪತ್ನಿ ಸವ್ಯಾ ಹೆರಿಗೆಗೆಂದು ಚೆಲುವಾಂಬಾ ಆಸ್ಪತ್ರೆಗೆ ಸೆ.2ರಂದು ದಾಖಲಾಗಿದ್ದರು. ಮಂಡ್ಯದಲ್ಲಿಯೇ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೆ.ಆರ್.ಆಸ್ಪತ್ರೆ ದೊಡ್ಡಾಸ್ಪತ್ರೆಯೆಂದು ದಾಖಲಾಗಿದ್ದರು. ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿಕೊಂಡಿದ್ದರು. ಆದರೆ ಮಗು ಮೃತಪಟ್ಟಿದೆ.

ಕಳೆದೆರಡು ದಿನಗಳಿಂದ ಇಲ್ಲಿ ನಾಲ್ಕು ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಆಸ್ಪತ್ರೆಯಲ್ಲಿರುವವರು ಹೇಳುತ್ತಿದ್ದಾರೆ. ಆಸ್ಪತ್ರೆಯವರು ಮೂರೇ ಮಗು ಸತ್ತಿರುವುದು ಎನ್ನುತ್ತಿದ್ದಾರೆ. ಕಿರಿಯ ಡಾಕ್ಟರ್ ಗಳಿಂದ ಶಸ್ತ್ರ ಚಿಕಿತ್ಸೆ ಮಾಡಿಸಿರುವುದರ ಜೊತೆಗೆ, ನವಜಾತ ಶಿಶುಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದಲೇ ಶಿಶುಗಳು ಸಾವನ್ನಪ್ಪಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಶಿಶುಗಳು ಅನಾರೋಗ್ಯದ ಸಮಸ್ಯೆಯಿಂದ ಸಾವನ್ನಪ್ಪಿವೆ ಎಂದು ಆಸ್ಪತ್ರೆಯ ಅಧೀಕ್ಷಕರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಿರಂತರ ನವಜಾತ ಶಿಶುಗಳ ಸಾವನ್ನಪ್ಪುತ್ತಲೇ ಇರುವುದು ಆತಂಕ ಸೃಷ್ಟಿಸಿದೆ











Click it and Unblock the Notifications