ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಬಂಧನ

ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಮನೆಗಳಲ್ಲೇ ದಂಧೆ ನಡೆಸುತ್ತಿದ್ದು, ದಂಪತಿಯಿಬ್ಬರು ಇದೇ ರೀತಿ ಮನೆಯಲ್ಲಿ ವ್ಯವಹಾರ ನಡೆಸುವಾಗ ಸಿಕ್ಕಿಬಿದ್ದಿರುವುದೇ ಸಾಕ್ಷಿಯಾಗಿದೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 24: ಮನೆಯನ್ನೇ ವೇಶ್ಯಾವಾಟಿಕೆ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ದಂಪತಿಯನ್ನು ನಗರದ ಸಿಸಿಬಿ ಮತ್ತು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ 4ನೇ ಹಂತದ ಮರಿಮಲ್ಲಪ್ಪ ಕಾಂಪೌಂಡ್ ಬಳಿ ವೀರೇಂದ್ರ (40) ಮತ್ತು ಪತ್ನಿ ಮಹೇಶ್ವರಿ (37) ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಇವರು ತಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ವೇಶ್ಯಾವಾಟಿಕೆ ಅಡ್ಡೆಗೆ ಬಂದಿದ್ದ ಎಚ್.ಡಿ.ಕೋಟೆಯ ಅಜಯ(26), ಗಿರೀಶ್(27) ಎಂಬುವರನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.[ಶ್ರೀರಂಗಪಟ್ಟಣ: ವೇಶ್ಯಾವಾಟಿಕೆ ಆರೋಪದಡಿ 7 ಬಂಧನ]

Husband and wife arrested in prostitution case in Mysuru

ವೇಶ್ಯಾವಾಟಿಕೆಗೆ ಬಳಕೆ ಮಾಡಿದ್ದ 16,060 ನಗದು, ನಾಲ್ಕು ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಮೈಸೂರಿನಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠಿತ ಬಡಾವಣೆಗಳ ಮನೆಯಲ್ಲೇ ನಡೆಯುವಂತಾಗಿರುವುದು ಆತಂಕಕ್ಕೀಡು ಮಾಡಿದೆ.

ನಗರದ ವಿವಿಧ ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಯನ್ನು, ಭೋಗ್ಯಕ್ಕೋ, ಬಾಡಿಗೆಗೆ ಪಡೆದು ಅಲ್ಲಿ ವೇಶ್ಯಾವಾಟಿಕೆಯನ್ನು ನಡೆಸುತ್ತಾರೆ. ಸಾಮಾಜಿಕ ಜಾಲ ತಾಣಗಳ ಮೂಲಕ ವ್ಯವಹಾರ ನಡೆಸುತ್ತಿದ್ದು, ಮನೆಗಳಲ್ಲಿ ದಂಧೆ ನಡೆಯುವುದರಿಂದ ಯಾವುದೇ ಭಯವಿಲ್ಲದೆ ಗ್ರಾಹಕರು ಬರುತ್ತಿದ್ದಾರೆ.[ಮಸಾಜ್ ಪಾರ್ಲರ್ ಮೇಲೆ ದಾಳಿ: ಇಬ್ಬರ ಬಂಧನ, ಮೂವರು ಯುವತಿಯರ ರಕ್ಷಣೆ]

ಇನ್ನು ನಗರ ಬಸ್ ನಿಲ್ದಾಣ, ಸಯ್ಯಾಜಿರಾವ್ ರಸ್ತೆ, ಪ್ರಭಾ ಟಾಕೀಸ್ ಪಕ್ಕ ಗಿರಾಕಿಗಳಿಗಾಗಿ ಕಾಯುತ್ತಾ ನಿಲ್ಲುವ ವೇಶ್ಯೆಯರು ಕಂಡು ಬರುತ್ತಿದ್ದಾರೆ. ಇವರಿಂದಾಗಿ ಇಲ್ಲಿ ಓಡಾಡುವ ಮರ್ಯಾದಸ್ಥ ಮಹಿಳೆಯರನ್ನು ಕೂಡ ಅದೇ ರೀತಿ ಭಾವಿಸುವಂತಾಗಿದೆ.

ಕೆಲವು ವರ್ಷಗಳ ಹಿಂದೆ ಈ ವ್ಯಾಪ್ತಿಯಲ್ಲಿ ವೇಶ್ಯೆಯರ ಹಾವಳಿಯಿಂದಾಗಿ ಗ್ರಾಹಕರು ಬಾರದೆ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ಮಾಲೀಕರು ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿದ್ದರು. ಆದರೆ ದಂಧೆಗೆ ಮಾತ್ರ ಕಡಿವಾಣ ಬಿದ್ದಿಲ್ಲ.

ಇತ್ತೀಚೆಗೆ ಈ ದಂಧೆಯಲ್ಲಿ ಪಳಗಿರುವ ಕೆಲವರು ಆಗಾಗ್ಗೆ ಮನೆಗಳನ್ನು ಬದಲಾಯಿಸುತ್ತಾ ತಮ್ಮ ವ್ಯವಹಾರವನ್ನು ಮುಂದುವರೆಸುತ್ತಿದ್ದಾರೆ.

English summary
Veerendra and Maheshwari- Husband and wife arrested in Mysuru, under prostitution case. They are doing this illicit activity in the house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X