ಗೋಹತ್ಯೆ ನಿಷೇಧ ಕಾಯ್ದೆ =ಮತಾಂತರ:ಮಹಾದೇವಪ್ಪ ಹೊಸ ಲೆಕ್ಕ!
ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ಕಾಯ್ದೆ ಎರಡೂ ಒಂದೇ ಎಂದು ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಇಂದು ಮೈಸೂರಿನಲ್ಲಿ ಟೀಕಿಸಿದ್ದಾರೆ.
ಮೈಸೂರು, ಮೇ 29 : ಗೋ ಹತ್ಯೆ ನಿಷೇಧ ಕಾಯ್ದೆಯೊಂದು ಮತಾಂತರ ಕಾಯ್ದೆ ಇದ್ದಂತೆ ಎಂದು ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಟೀಕಿಸಿದ್ದಾರೆ.
ಮೈಸೂರಿನ ಮೇಟಗಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಯದೇವ ಹೃದ್ರೋಗ ಆಸ್ಪತ್ರೆ ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡುತ್ತಿದ್ದರು.

ಗಾಂಧೀಜಿ ಹೇಳಿಕೆ ಉಲ್ಲೇಖಿಸಿ, ಗೋ ಹತ್ಯೆ ನಿಷೇಧ ಕಾಯ್ದೆ, ಒಂದು ಧರ್ಮದ ಆಹಾರ ಪದ್ಧತಿ, ಮತ್ತೊಂದು ಧರ್ಮದ ಮೇಲೆ ಹೇರಿಕೆ ಮಾಡುವುದು ಮತಾಂತರವಿದ್ದಂತೆ ಎಂದು ಗಾಂಧೀಜಿ ಅಭಿಪ್ರಾಯಪಟ್ಟಿದ್ದರು. ಬಿಜೆಪಿ ಮಂದಿ ಎಂದೂ ಸಗಣಿ ಬಾಚಿಲ್ಲ, ಗೋವುಗಳ ಮೈ ತೊಳೆದಿಲ್ಲ ಇವರು ಗೋವುಗಳ ಬಗ್ಗೆ ಮಾತನಾಡುತ್ತಾರೆ ಎಂದು ಕೇಂದ್ರದ ನೂತನ ಕಾಯ್ದೆ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಗೋ ಮಾರಾಟ ನಿಷೇಧ ಕಾಯ್ದೆಯನ್ನು ಪುನರ್ ಪರಿಶೀಲನೆ ಮಾಡಲಿ. ಭಾವನಾತ್ಮಕ ವಿಚಾರಗಳನ್ನು ಜನರ ಮನಸ್ಸಲ್ಲಿ ತುಂಬಿ ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ ಎಂದರು. ಕೇಂದ್ರ ಸರ್ಕಾರ ಜಾರಿ ಮಾಡಿರುವ ಗೋ ಮಾರಾಟ ನಿಷೇಧ ಕಾಯ್ದೆಯನ್ನು ಪುನರ್ ಪರಿಶೀಲನೆ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.











Click it and Unblock the Notifications