ಮೈಸೂರಿನಲ್ಲಿ ಉರುಳಿಗೆ ಸಿಲುಕಿ ಗಂಡು ಚಿರತೆ ಸಾವು
ಹಸಿವಿನಿಂದಾಗಿ ಆಹಾರ ಅರಸಿ ಬಂದ 2 ಚಿರತೆಗಳಲ್ಲಿ ಗಂಡು ಚಿರತೆ ಉರುಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ.
ಮೈಸೂರು, ಜೂನ್ 2: ಹಸಿವಿನಿಂದಾಗಿ ಆಹಾರ ಅರಸಿ ಬಂದ 2 ಚಿರತೆಗಳಲ್ಲಿ ಗಂಡು ಚಿರತೆ ಉರುಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ.

ಇಲ್ಲಿನ ಶಿವಣ್ಣ ಎಂಬವರ ಜಮೀನಿನಲ್ಲಿ 2 ವರ್ಷದ ಗಂಡು ಚಿರತೆ ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ. ಸಂಗಾತಿ ಚಿರತೆ ಸಾವಿನಿಂದ ಕಂಗಾಲಾದ ಹೆಣ್ಣು ಚಿರತೆ ಹುಡುಕಾಟ ನಡೆಸಿದ್ದು, ಗಂಡು ಚಿರತೆಯನ್ನು ಹುಡುಕುತ್ತಾ ಬಂದಿರುವ ಚಿರತೆಯನ್ನು ಕಂಡು ಬೆಟ್ಟದಪುರ ಗ್ರಾಮಸ್ಥರು ಭಯಭೀತರಾಗಿದ್ದಾರೆ.[ಗೋಮಾಂಸ ನಿಷೇಧದಿಂದ ಮೈಸೂರು ಜೂ ಕಂಗಾಲು, ಮುಂದೇನು?]

ಸ್ಥಳಕ್ಕೆ ಎಸಿಎಫ್ ಸೋಮಪ್ಪ, ಆರ್.ಎಫ್.ಒ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ದೂರದ ಬಂಡೆ ಕಲ್ಲಿನ ಮೇಲೆ ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.











Click it and Unblock the Notifications