• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ ರಾಣಾ ಕಪೂರ್ ಆಪ್ತರ ಮನೆ ಮೇಲೆ ಸಿಬಿಐ ದಾಳಿ

|

ಮುಂಬೈ, ಮಾರ್ಚ್ 09 : ಮುಂಬೈನ 7 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ. ಇಡಿ ರಾಣಾ ಕಪೂರ್‌ ಬಂಧಿಸಿದ್ದು, ಮಾರ್ಚ್ 11ರ ತನಕ ಇಡಿ ವಶಕ್ಕೆ ನೀಡಲಾಗಿದೆ.

ಸೋಮವಾರ ಸಿಬಿಐನ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಮುಂಬೈನ ಏಳು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ರಾಣಾ ಕಪೂರ್ ವಿರುದ್ಧ ಆರ್ಥಿಕ ಅಪರಾಧ ಆರೋಪದ ಮೇಲೆ ಪ್ರಕರಣವನ್ನು ಇಡಿ ದಾಖಲು ಮಾಡಿದೆ.

ಯೆಸ್ ಬ್ಯಾಂಕ್; ರಾಣಾ ಕಪೂರ್‌ ಮಾ.11ರ ತನಕ ಇಡಿ ಕಸ್ಟಡಿಗೆ

ಸಿಬಿಐ ಶುಕ್ರವಾರ ಮಾರ್ಚ್ 7ರಂದು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್, ರಾಣಾ ಕಪೂರ್‌ಗೆ ಸಂಬಂಧಿಸಿದ ಕಂಪನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡಿತ್ತು. ಇದರ ಹಿನ್ನಲೆಯಲ್ಲಿ ಇಂದು ದಾಳಿ ನಡೆಸಲಾಗಿದೆ.

ಏರ್‌ಪೋರ್ಟ್‌ನಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕರ ಮಗಳ ತಡೆದ ಅಧಿಕಾರಿಗಳು

ಭಾನುವಾರ ಮುಂಜಾನೆ 3 ಗಂಟೆಗೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್‌ನನ್ನು ಇಡಿ ಬಂಧಿಸಿತ್ತು. ಮುಂಬೈನ ರಜಾಕಾಲದ ವಿಶೇಷ ನ್ಯಾಯಾಲಯದ ಮುಂದೆ ಇಡಿ ಅಧಿಕಾರಿಗಳು ಅವರನ್ನು ಹಾಜರುಪಡಿಸಿದ್ದರು. ಮಾರ್ಚ್ 11ರ ತನಕ ಅವರನ್ನು ಇಡಿ ವಶಕ್ಕೆ ನೀಡಲಾಗಿದೆ.

ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಬಂಧನ

ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ (ಡಿಎಚ್‌ಎಫ್‌ಎಲ್) ಜೊತೆ ಯೆಸ್ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಣಾ ಕಪೂರ್ ವಿಚಾರಣೆ ನಡೆಸಲಿದ್ದಾರೆ. ಡಿಎಚ್‌ಎಫ್‌ಎಲ್‌ಗೆ ಬ್ಯಾಂಕ್ ಭಾರಿ ಮೊತ್ತದ ಸಾಲ ನೀಡಿದೆ. ಇದಕ್ಕೆ ಪ್ರತಿಯಾಗಿ ರಾಣಾ ಕಪೂರ್ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ.

English summary
Central Bureau of Investigation (CBI) is conducting searches at 7 locations in Mumbai. Economic Offence Wing of CBI in filed FIR connection with a case against YesBank founder Rana Kapoor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X