ಮುಂಬೈನಲ್ಲಿ ಆಟಿಕೆಗಳಂತಾದ ರೈಲು, ಬಸ್ಸು, ಕಾರು, ಝಲ್ ಅಂತದೆ ಜನ ಜೀವನ

ಮಹಾರಾಷ್ಟ್ರದ ಮುಂಬೈ ಮಹಾನಗರ ನೀರಿನಲ್ಲಿ ಅದ್ದಿಟ್ಟ ಬಟ್ಟೆಯಂತಾಗಿದೆ. ರಸ್ತೆಗಳಲ್ಲಿ ಮೊಳಕಾಲುದ್ದದಷ್ಟು ನೀರು. ವಾಹನಗಳಲ್ಲಿ ತೆರಳಬೇಕು ಅಂದರೆ ಹರ ಸಾಹಸ. ಯಾವ ಕಡೆ ತಿರುಗಿ ನೋಡಿದರೂ ನೀರೋನೀರು. ಮುಂಗಾರಿನ ಪ್ರವೇಶ ಅದ್ಯಾವ ಪರಿಯಲ್ಲಿ ಇಲ್ಲಿನ ಜನ ಜೀವನದ ಮೇಲೆ ಪರಿಣಾಮ ಬೀರಿದೆ ಅನ್ನೋದನ್ನು ಇಲ್ಲಿನ ಫೋಟೋಗಳನ್ನು ನೋಡಿಯೇ ತಿಳಿಯಬೇಕು.

ಮಕ್ಕಳು ಆಟಿಕೆ ವಸ್ತುಗಳನ್ನು ನೀರಲ್ಲಿ ನೆನೆಸಿಟ್ಟು, ತಮ್ಮ ಅಪ್ಪ- ಅಮ್ಮನನ್ನು ಕರೆದು, ಬಾಲ ಚೇಷ್ಟೆಗಳನ್ನು ತೋರಿಸುತ್ತಾರಲ್ಲಾ, ಹಾಗೆ ಇಷ್ಟೆತ್ತರದ ನೀರನ್ನು ಸೀಳಿ ಮುಂದೆ ಬರುತ್ತಿರುವ ರೈಲು, ಕಾರು, ಬಸ್ಸು, ಸ್ಕೂಟರ್- ಬೈಕ್... ಹೀಗೆ ಯಾವ ವಾಹನ ಅಲ್ಲ ಹೇಳಿ, ಎಲ್ಲವೂ ಮಳೆಯ ಅಬ್ಬರಕ್ಕೆ ಸಿಲುಕಿದ ಆಟಿಕೆಗಳಂತೆಯೇ ಕಾಣುತ್ತಿವೆ.

ಇಲ್ಲಿ ಕೆಲವು ಫೋಟೋ- ಮಾಹಿತಿಗಳಿವೆ. ಅವುಗಳಲ್ಲಿ ಬಹುತೇಕ ಮುಂಬೈ ಮಳೆಯ ಅಬ್ಬರ ಹಾಗೂ ಆರ್ಭಟದ್ದೇ ಫೋಟೋಗಳು. ಅವುಗಳನ್ನು ಹೊರತುಪಡಿಸಿದರೆ ರಾಜಸ್ತಾನದ ಬಿಕನೇರ್ ನಲ್ಲಿ ಧೂಳಿನಿಂದ ದಟ್ಟೈಸಿದ ಮೋಡ. ಹಾಗೂ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಮುಂಗಾರು ಪೂರ್ವ ಮಳೆಗೆ ತೋಯುತ್ತಿರುವ ಜನರು. ಒಟ್ಟಿನಲಿ ಪಿಟಿಐನ ಫೋಟೋಗಳು. ಎಷ್ಟೊಂದು ಮಳೆ ಮಳೆ ಮಳೆಯನ್ನು ಹೇಳುತ್ತಿವೆ ನೋಡಿ...

ನೀರ ತೊಟ್ಟಿಯ ಮಧ್ಯೆ ರೈಲು ಬರ್ತಿದೆಯೇನೋ..

ನೀರ ತೊಟ್ಟಿಯ ಮಧ್ಯೆ ರೈಲು ಬರ್ತಿದೆಯೇನೋ..

ಮಕ್ಕಳು ಆಟವಾಡುವ ನೀರಿನ ತೊಟ್ಟಿಯೊಳಗೆ ರೈಲೊಂದು ಬಂತೇನೋ ಎನಿಸುವಂತೆ ಕಾಣುತ್ತಿರುವ ಈ ರೈಲಿನ ದೃಶ್ಯ ಮುಂಬೈ ಮಹಾ ನಗರಿಯಲ್ಲಿ ಶನಿವಾರ ಕಂಡದ್ದು. ಮುಂಗಾರು ಮಳೆಗೆ ಮುಂಬೈ ಎಂಬ ಮುಂಬೈ ನಗರ ನೀರೊಳಗೆ ಅದ್ದಿಟ್ಟ ಬಟ್ಟೆಯಂತಾಗಿದೆ. ಅಂಥದ್ದೇ ಸನ್ನಿವೇಶವನ್ನು ತುಂಬ ಚೆನ್ನಾಗಿ ಕಟ್ಟಿಕೊಂಡುವಂಥ ಪಿಟಿಐ ಫೋಟೋ ಇದು. ಫೋಟೋ ತೆಗೆದವರು ಶಶಾಂಕ್ ಪರಾಡೆ.

ಸ್ಮೈಲ್ ಪ್ಲೀಸ್ ಎಂದಂತೆ ಅಂಥ ನಗೆ ನಕ್ಕ ಹಿಂಬದಿ ಸವಾರ

ಸ್ಮೈಲ್ ಪ್ಲೀಸ್ ಎಂದಂತೆ ಅಂಥ ನಗೆ ನಕ್ಕ ಹಿಂಬದಿ ಸವಾರ

ಮುಂಬೈ ನಗರಿಯೇ ಮಳೆಗೆ ಶೀತವಾದಂತೆ ಕಾಣುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಕಂಡಿರುವ ಎರಡು ಚಕ್ರದ ವಾಹನವೊಂದು ಲೆಕ್ಕವೇ! ಅಲ್ಲಿ ಕಿಂಗ್ ವೃತ್ತ ನೀರಿನಿಂದ ತುಂಬಿ ಹೋಗಿರುವಾಗ ದ್ವಿಚಕ್ರ ವಾಹನ ಸವಾರರೊಬ್ಬರ ಸಾಹಸವಿದು. ಅಂಥ ಮಳೆಯಲ್ಲೂ ಮುಖದ ಮೇಲೊಂದು ನಗೆ ಇರಿಸಿಕೊಂಡ ಹಿಂಬದಿ ಚಾಲಕನಿಗೆ ಫೋಟೋಗ್ರಾಫರ್ ಸ್ಮೈಲ್ ಪ್ಲೀಸ್ ಅಂದಿರ್ತಾರೇನು?

ನೀರಿನಲ್ಲಿ ಮುಳುಗಿಸಿಟ್ಟ ಬಸ್ಸು, ಕಾರು!

ನೀರಿನಲ್ಲಿ ಮುಳುಗಿಸಿಟ್ಟ ಬಸ್ಸು, ಕಾರು!

ಈ ಫೋಟೋ ಕೂಡ ಮುಂಬೈನ ಕಿಂಗ್ ವೃತ್ತದ್ದೇ. ರಸ್ತೆಯಲ್ಲಿ ನೀರು ನಿಂತಿರುವಾಗ ಮೇಲ್ಮುಖದಿಂದ ರಸ್ತೆ ಹಾಗೂ ವಾಹನಗಳು ಸಾಗುವುದು ಹೇಗೆ ಕಾಣುತ್ತಿದೆ ಎಂಬುದನ್ನು ಫೋಟೋಗ್ರಾಫರ್ ಶಶಾಂಕ್ ಪರಾಡೆ.

ಒಂದೆಡೆ ಪರದಾಟ, ಮತ್ತೊಂದೆಡೆ ಮೋಜಿನಾಟ

ಒಂದೆಡೆ ಪರದಾಟ, ಮತ್ತೊಂದೆಡೆ ಮೋಜಿನಾಟ

ಮುಂಗಾರು ಮಳೆಗೆ ನೀರಿನಿಂದ ತುಂಬಿ ಹರಿಯುತ್ತಿರುವ ಮುಂಬೈನ ರಸ್ತೆಗಳನ್ನು ದಾಟಲು ಜನರು ಪಡುತ್ತಿರುವ ಪಾಡಿದು. ಕೆಲವು ಹುಡುಗರಿಗೆ- ಯುವಕರಿಗೆ ಮಳೆಯೆಂದರೆ ಮೋಜು. ಈ ಮೂವರು ಮಹಿಳೆಯರು ಪಡುತ್ತಿರುವ ಕಷ್ಟ ನೋಡಿ.

ಧೂಳಿನ ಮೋಡ, ಚಿತ್ರವ ನೋಡ

ಧೂಳಿನ ಮೋಡ, ಚಿತ್ರವ ನೋಡ

ಹ್ಞಾಂ, ಈ ಫೋಟೋ ರಾಜಸ್ತಾನದ ಬಿಕನೇರ್ ನಗರದ್ದು. ಶನಿವಾರ ಆ ನಗರದಲ್ಲಿ ಧೂಳಿನಿಂದ ಕೂಡಿದ್ದ ಮೋಡ ಆಕಾಶದಲ್ಲಿ ಕಂಡಿದ್ದು ಹೀಗೆ. ಅದೇ ರೀತಿಯಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ಅಲಹಾಬಾದ್ ನಲ್ಲಿ ಮುಂಗಾರುಪೂರ್ವ ಮಳೆ

ಅಲಹಾಬಾದ್ ನಲ್ಲಿ ಮುಂಗಾರುಪೂರ್ವ ಮಳೆ

ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಮುಂಗಾರು ಪೂರ್ವ ಮಳೆ ಭಾರೀ ಜೋರಾಗಿ ಸುರಿಯುತ್ತಿದೆ. ಅಲ್ಲಿನ ಕುಟುಂಬವೊಂದು ಮಳೆಯ ಮಧ್ಯೆಯೇ ವಾಹನದಲ್ಲಿ ತೆರಳುವಾಗ ಕಂಡ ದೃಶ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+