ನಟಿ ಸನ್ನಿ ಲಿಯೋನ್ ವಿರುದ್ಧ ಮಾನನಷ್ಟ ಮೊಕದ್ದಮೆ!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 05: ಮಾಜಿ ನೀಲಿಚಿತ್ರ ತಾರೆ ಸನ್ನಿ ಲಿಯೋನ್ ಅವರು ಸದ್ಯ 'ಒನ್ ನೈಟ್ ಸ್ಟ್ಯಾಂಡ್' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಸನ್ನಿ ವಿರುದ್ಧ ಮುಂಬೈ ಹೈಕೋರ್ಟಿನಲ್ಲಿ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಸನ್ನಿ ಲಿಯೋನ್ ವಿರುದ್ಧ ರೂಪದರ್ಶಿ ಪೂಜಾ ಮಿಶ್ರಾ ಅವರು ಮುಂಬೈ ಹೈಕೋರ್ಟ್​ನಲ್ಲಿ 100 ಕೋಟಿ ರು. ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಬಿಗ್​ಬಾಸ್ ಸೀಸನ್-5ನ ಸ್ಪರ್ಧಿಯಾಗಿದ್ದ ಪೂಜಾ ಮಿಶ್ರಾ ಸೋಮವಾರ(ಏಪ್ರಿಲ್ 04) ಈ ಪ್ರಕರಣ ದಾಖಲಿಸಿದ್ದಾರೆ.

Sunny Leone Gets Sued For A Whopping Rs 100 Crores!

ಬಿಗ್​ಬಾಸ್ ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿಯಾಗಿದ್ದು, ತಮ್ಮ ವಿರುದ್ಧ ಸನ್ನಿ ಲಿಯೋನ್ ಮಾಧ್ಯಮಗಳಿಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ವೃತ್ತಿ ಜೀವನದಲ್ಲಿ ಹಿನ್ನಡೆ ಉಂಟಾಗಿದೆ. ಈಗಾಗಲೇ ಸನ್ನಿ ನೀಡಿರುವ ಹೇಳಿಕೆಗಳಿಂದ ನನಗೆ 70 ಲಕ್ಷ ರು. ನಷ್ಟವಾಗಿದೆ. ಮಾನಸಿಕ ಹಾಗೂ ಆರ್ಥಿಕವಾಗಿ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ 100 ಕೋಟಿ ರೂ. ಪರಿಹಾರ ಕೊಡಿಸಬೇಕು ಎಂದು ಮಿಶ್ರಾ ಅರ್ಜಿಯಲ್ಲಿ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 500 ಹಾಗೂ 120(ಬಿ) ಅನ್ವಯ ಪ್ರಕರಣ ದಾಖಲಿಸಿಕೊಂಡು ಸನ್ನಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

ನಟಿ ಸನ್ನಿ ಲಿಯೋನ್ ಬೆಕ್ಕಿನ ನಡಿಗೆ, ತುಂಬುಡುಗೆ

ನಟಿ ಸನ್ನಿ ಲಿಯೋನ್ ಬೆಕ್ಕಿನ ನಡಿಗೆ, ತುಂಬುಡುಗೆ

-
-
-
-
-

ಪೂಜಾ ಮಿಶ್ರಾ ಈ ಹಿಂದೆ ಸೋನಾಕ್ಷಿ ಸಿನ್ಹಾ ಅವರ ತಾಯಿ ಪೂನಮ್ ಸಿನ್ಹಾ ವಿರುದ್ಧ ಕೂಡಾ ಕಿಡಿಕಾರಿದ್ದರು. ಪೂನಮ್ ಅವರು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದರು. ಸದ್ಯಕ್ಕೆ ಈ ಪ್ರಕರಣ ಕೋರ್ಟಿನಲ್ಲಿ ವಿಚಾರಣೆಗೆ ಜೂನ್ 2016ರ ನಂತರವಷ್ಟೇ ಬರಲು ಸಾಧ್ಯ. ರಜಾಕಾಲದ ಪೀಠ ಈಗಾಗಲೇ ಅರ್ಜಿಯನ್ನು ಪಕ್ಕಕ್ಕೆ ತಳ್ಳಿದೆ. ಸನ್ನಿಗೆ ಕಾಡುತ್ತಿರುವ ಪೂಜಾ ಮಿಶ್ರಾಗೆ ಪ್ರಚಾರಪ್ರಿಯೆ ಎಂಬ ಟ್ಯಾಗ್ ಬಿದ್ದು ಬಹುಕಾಲವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
One Night Stand actress got sued for a whopping Rs 100 crores by Model Pooja Misrra.Pooja Misrra, a model and former Bigg Boss contestant has slapped a case against Sunny at the Bombay High Court demanding Rs 100 crore compensation for allegedly "defaming her".
Please Wait while comments are loading...