ಪೊಲೀಸರನ್ನು ಅಣಕಿಸಲು ಹೋಗಿ ತಿರುಗೇಟು ತಿಂದ ಲೇಖಕಿ

ವಿವಾದಿತ ಜನಪ್ರಿಯ ಲೇಖಕಿ ಶೋಭಾ ಡೇ ಅವರು ಮುಂಬೈ ಪೊಲೀಸರನ್ನು ಅಣಕಿಸಲು ಹೋಗಿ ಸರಿಯಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ. ಡೇ ಅವರು ಡೊಳ್ಳು ಹೊಟ್ಟೆಯುಳ್ಳ ಪೊಲೀಸರೊಬ್ಬರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು.

ಮುಂಬೈ, ಫೆಬ್ರವರಿ 22: ವಿವಾದಿತ ಜನಪ್ರಿಯ ಲೇಖಕಿ ಶೋಭಾ ಡೇ ಅವರು ಮುಂಬೈ ಪೊಲೀಸರನ್ನು ಅಣಕಿಸಲು ಹೋಗಿ ಸರಿಯಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ.

ಡೇ ಅವರು ಡೊಳ್ಳು ಹೊಟ್ಟೆಯುಳ್ಳ ಪೊಲೀಸರೊಬ್ಬರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಮುಂಬೈ ಪೊಲೀಸ್ ಇಲಾಖೆ ಸಕತ್ ಪ್ರತಿಕ್ರಿಯೆ ನೀಡಿದೆ.[ಕ್ರೀಡಾಪಟುಗಳನ್ನು ಕೆಣಕಿದ ಶೋಭಾ ಡೇಗೆ ಟ್ವಿಟ್ಟರ್ ನಲ್ಲಿ ಗುದ್ದು]

Shobhaa De tries to mock cop; gets trolled by Mumbai police in return

ಜವಾಬ್ದಾರಿಯುತ ನಾಗರಿಕರಾದ ನೀವು ಈ ರೀತಿ ಟ್ವೀಟ್ ಮಾಡುವ ಮೊದಲು ಪರಿಶೀಲಿಸಿ ಎಂದು ಮುಂಬೈ ಪೊಲೀಸ್ ಅವರು ಟ್ವೀಟ್ ಮಾಡಿದೆ. ಡೊಳ್ಳು ಹೊಟ್ಟೆಯ ಪೇದೆಯ ಚಿತ್ರವನ್ನು ಹಾಕಿ 'ಹೆವಿ ಬಂದೋಬಸ್ತ್' ಎಂದು ಡೇ ಅವರು ಕಾಮಿಡಿ ಮಾಡಿದ್ದರು.

ಮುಂಬೈ ಮಹಾನಗರ ಪಾಲಿಕೆಗೆ ಮಂಗಳವಾರ ಮತದಾನ ನಡೆಯಿತು. ಈ ಸಂದರ್ಭದಲ್ಲಿ ಮತದಾನ ಮಾಡಲು ಬಂದಿದ್ದ ಡೇ ಅವರ ಕಣ್ಣಿಗೆ ಈ ಖಾಕಿ ಡ್ರೆಸ್ ಧರಿಸಿದ್ದ ದಢೂತಿ ವ್ಯಕ್ತ ಕಾಣಿಸಿದ್ದಾನೆ. ಆತನ ಚಿತ್ರ ತೆಗೆದು, ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ.

ಆದರೆ, ಈ ಫೋಟೊದಲ್ಲಿರುವ ವ್ಯಕ್ತಿ ನಮ್ಮ ಡಿಪಾರ್ಟಮೆಂಟಿಗೆ ಸೇರಿದವರಲ್ಲ, ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ ಎಂದು ಪೊಲೀಸರು ಎಚ್ಚರಿಕೆ ಸಹಿತ ಸಂದೇಶ ಹಾಕಿದ್ದಾರೆ. ಈ ವ್ಯಕ್ತಿ ಯಾರು ಎಂಬುದರ ಬಗ್ಗೆ ಟ್ವಿಟ್ಟರ್ ನಲ್ಲಿ ಚರ್ಚೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+