ಶಿವಸೇನೆಯಿಂದ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ
ಮುಂಬೈ, ಅ.12: ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಅವರ ರಾಜಕೀಯ ಸಲಹೆಗಾರ ಕನ್ನಡಿಗ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಶಿವಸೇನೆ ಕಾರ್ಯಕರ್ತರುಸೋಮವಾರ ಬೆಳಗ್ಗೆ ಮಸಿ ಬಳಿದಿದ್ದಾರೆ. ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಮಹಮ್ಮದ್ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭ ರದ್ದು ಮಾಡಲು ಸುಧೀಂದ್ರ ಅವರು ನಿರಾಕರಿಸಿದ್ದಕ್ಕೆ ಈ ರೀತಿ ಪ್ರತಿಕಾರ ತೆಗೆದುಕೊಳ್ಳಲಾಗಿದೆ.
ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಮಹಮ್ಮದ್ ಕಸೂರಿಯವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮುಖಕ್ಕೆ ಮಸಿಯಾಗಿದ್ದರೂ ಮುಂಬೈನಲ್ಲಿ ಕಸೂರಿ ಅವರ ಜೊತೆ ಕುಳಿತು ಸುಧೀಂದ್ರ ಕುಲಕರ್ಣಿಯವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಸುಮಾರು 8 ರಿಂದ 10 ಮಂದಿ ಶಿವ ಸೇನೆಯ ಸದಸ್ಯರು ನನ್ನ ಮನಗೆ ಬಂದು ಈ ಕೃತ್ಯ ಎಸಗಿದ್ದಾರೆ. ಇದು ನನಗೆ ಬಳಿದ ಮಸಿ ಬಳಿದಿಲ್ಲ. ಸಿದ್ದಾಂತಗಳಿಗೆ ಮಸಿ ಬಳಿದಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕಾರ್ಯಕ್ರಮ ರದ್ದು ಮಾಡುವುದಿಲ್ಲ ಎಂದು ಸುಧೀಂದ್ರ ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.
I profusely thank MaharashtraCM @Dev_Fadnavis for his principled & firm stand against #ShivSena threat to disurpt #Kasuri booklaunch #Mumbai
— Sudheendra Kulkarni (@SudheenKulkarni) October 12, 2015 ಮಾಜಿ ವಿದೇಶಾಂಗ ಸಚಿವ ಕಸೂರಿ ಅವರು ಪಾಕಿಸ್ತಾನ ವಿದೇಶಾಂಗ ಯೋಜನೆ ಕುರಿರು ಬರೆದಿರುವ "ನೈದರ್ ಅ ಹಾಕ್ ನಾರ್ ಎ ಡವ್' ಎಂಬ ಪುಸ್ತಕ ಬಿಡುಗಡೆ ಸಮಾರಂಭ ಸೋಮವಾರ ಮಧ್ಯಾಹ್ನ ಆಯೋಜನೆಗೊಂಡಿದೆ.
कसम से मियां @SudheenKulkarni मस्त लग रहे हो
"Neither a HAWK nor a DOVE.. I am just a Paki spokesperson"
@TimesNow pic.twitter.com/TtJiDJvNGO
— #GauravPradhan (@DrGPradhan) October 12, 2015 ಪಾಕಿಸ್ತಾನ ಭಯೋತ್ಪಾದನೆ ಬೆಂಬಲಿಸುತ್ತಿರುವಾಗ, ಅಲ್ಲಿಯ ಮಾಜಿ ಸಚಿವರೊಬ್ಬರ ಪುಸ್ತಕ ಬಿಡುಗಡೆ ಸಮಾರಂಭ ಭಾರತದಲ್ಲಿ ನಡೆಯುವುದು ಸರಿಯಲ್ಲ ಎಂದು ಶಿವಸೇನೆ ಆಗ್ರಹಿಸಿದೆ.












Click it and Unblock the Notifications