ಹಲ್ಲೆ ಪ್ರಕರಣ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ವಿರುದ್ಧ ಎಫ್ ಐಆರ್

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 26: ನಟ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೇರಾ ವಿರುದ್ಧ ಮುಂಬೈ ಪೊಲೀಸರು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ದಾಖಲಿಸಿದ್ದಾರೆ.

ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶೇರಾ ವಿರುದ್ಧ ದೂರು ದಾಖಲಾಗಿತ್ತು. ಮುಂಬೈನ ಡಿಎನ್ ನಗರ ಪೊಲೀಸರು ಶೇರಾನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.

Salman Khan’s bodyguard Shera booked for assault

ಬೆಳಗಿನ ಜಾವ 2.30 ರ ವೇಳೆಗೆ ಶಿತ್ಲಾದೆವಿ ಕಾರ್ನರ್ ಬಳಿಯ ಪಬ್ ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರಿಗೆ ಹೊಡೆದು, ಕುತ್ತಿಗೆ ಮೂಳೆ ಮುರಿದಿದ್ದಲ್ಲದೆ, ಪಿಸ್ತೂಲ್ ತೋರಿಸಿ ಬೆದರಿಸಿದ ಆರೋಪ ಶೇರಾ ಮೇಲಿದೆ. ಡಿಎನ್ ನಗರ ಪೊಲೀಸರು ಐಪಿಸಿ ಸೆಕ್ಷನ್ 326 ಹಾಗೂ 506 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಲ್ಮಾನ್ ಖಾನ್ ಜತೆ ಸುಮಾರು 18ವರ್ಷಗಳಿಂದ ಇರುವ ಅಂಗರಕ್ಷಕ ಶೇರಾ ಕೂಡಾ ಸೆಲೆಬ್ರಿಟಿಯಾಗಿದ್ದಾನೆ. ಸಲ್ಮಾನ್ ಅವರ ಆಪ್ತವರ್ಗದಲ್ಲಿ ಆಪ್ತ ಸಹಾಯಕಿ ರೇಷ್ಮಾ ಶೆಟ್ಟಿ ಹಾಗೂ ಶೇರಾ ಪ್ರಮುಖರಾಗಿದ್ದಾರೆ. ಸಲ್ಮಾನ್ ಕುಟುಂಬದಲ್ಲೂ ಗುರ್ಮಿತ್ ಸಿಂಗ್ ಜಾಲಿ ಅಲಿಯಾಸ್ ಶೇರಾ ಕೂಡಾ ಒಂದು ಸದಸ್ಯನಂತೆ ಬೆಳೆದಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Case registered against Salman Khan's bodyguard Shera at D N Nagar Police Station in Mumbai.An FIR has been registered against Shera under section 326 and 506 of the IPC for voluntarily causing grievous hurt by dangerous weapon and criminal intimidation.
Please Wait while comments are loading...