ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಗಿಮಿಕ್! ಶಿವಸೇನೆ ಪಂಚ್
ಮುಂಬೈ, ಜನವರಿ 22: ಸಬ್ ಕಾ ಸಾಥ್ ಸಬ್ ಕಾ ಸಾಥ್ ಎಂಬುದು ಕೇವಲ ಪ್ರಚಾರದ ಗಿಮಿಕ್ ಅಷ್ಟೆ ಎಂದು ಬಿಜೆಪಿ ಸರ್ಕಾರಕ್ಕೆ ಶಿವಸೇನೆ ಪಂಚ್ ನೀಡಿದೆ.
ಆಕ್ಸ್ಫಾಮ್ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದ್ದು, ಅದನ್ನು ಶಿವಸೇನೆ ಟೀಕಿಸಿದೆ. ಎಲ್ಲರ ಜೊತೆ, ಎಲ್ಲರ ವಿಕಾಸ ಎಂಬ ನರೇಂದ್ರ ಮೋದಿ ಸರ್ಕಾರದ ಘೋಷಣೆಯ ಅರ್ಥ ಇದೆಯೇ ಎಂದು ಅದು ಪ್ರಶ್ನಿಸಿದೆ.
ಭಾರತದ ಒಟ್ಟು ಶೇ.51.53 ಪ್ರತಿಶತ ಭೂಮಿಯನ್ನು ಕೇವಲ 1 ಪ್ರತಿಶತ ಜನರು ಹೊಂದಿದ್ದಾರೆ. ಒಟ್ಟು 2,200 ಕೋಟಿ ಹಣವನ್ನು ಭಾರತದ ಕೇವಲ 1 ಪ್ರತಿಶತ ಜನರು ದಿನದ ಆದಾಯವನ್ನಾಗಿ ದುಡಿದಿದ್ದಾರೆ. ಹಾಗಾದರೆ ಈ ದೇಶದ ಬಡವರ ಕತೆ ಏನು ಎಂದು ಅದು ಪ್ರಶ್ನಿಸಿದೆ.

ಮೋದಿ ಸರ್ಕಾರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಕೇವಲ ಭಾಷಣಕ್ಕೆ ಸೀಮತಿವಾದರೆ ಸಾಲದು. ಅದು ಕಾರ್ಯರೂಪಕ್ಕೆ ಬರಬೇಕು ಎಂದು ಹೇಳಿದೆ.












Click it and Unblock the Notifications