ಮಹಾರಾಷ್ಟ್ರ ಬಿಜೆಪಿ ನಾಯಕನ ಕಾರಲ್ಲಿ ಸಿಕ್ಕ ಹಣವೆಷ್ಟು?

Posted By:
Subscribe to Oneindia Kannada

ಮುಂಬೈ, ನವೆಂಬರ್ 18: ಮೋದಿ ಸರ್ಕಾರದಲ್ಲಿ ಕಪ್ಪುಹಣ ನಿರ್ಣಾಮ ಮಾಡಲು ಹೊಸ ನೋಟುಗಳನ್ನು ಜಾರಿ ಮಾಡಿದ್ದಾಗಿದೆ, ಈ ಜಾಲದಲ್ಲಿ ಮಹಾರಾಷ್ಟ್ರ ಸಚಿವರೊಬ್ಬರು ಸಿಕ್ಕಿ ಬಿದ್ದು ತಮ್ಮ ಹತ್ತಿರವಿದ್ದ ಹಣ ತಪಾಸಣಾ ದಳದ ಪಾಲಾಗಿದೆ.

ಇವರು ಬಿಜೆಪಿ ಹಿರಿಯ ನಾಯಕ ಮಹಾರಾಷ್ಟ್ರ ಸಹಕಾರ ಸಚಿವ ಸುಭಾಷ್ ದೇಶ್ ಮುಖ್, ಅವರ ಖಾಸಗಿ ವಾಹನದಲ್ಲಿ ಬರೋಬ್ಬರಿ ರು.91.5 ಲಕ್ಷ ಸಿಕ್ಕಿರುವ ದೇಶಮುಖ್ ಅವರು ಮುಖ ತೋರಿಸದಂತೆ ಮಾಡಿದೆ.

ಸಚಿವರಿಗೆ ಸೇರಿದ ಸೊಲ್ಲಾಪುರ ಮೂಲದ ಲೋಕ್ ಮಂಗಲ್ ಗ್ರೂಪಿಗೆ ಸೇರಿದ ವಾಹನದಲ್ಲಿ ಈ ಹಣ ಪತ್ತೆಯಾಗಿದ್ದು ಈ ಹಣವೆಲ್ಲವೂ ಒಂದ ಸಾವಿರ ನೋಟಿನಿಂದ ಕೂಡಿದೆ.[ಸೂರತ್ ವ್ಯಾಪಾರಿ 6 ಸಾವಿರ ಕೋಟಿ ಸರಕಾರಕ್ಕೆ ಒಪ್ಪಿಸಿದರಾ?]

Rs 92 lakh cash seized from BJP minister's vehicle

ನಗದನ್ನು ಒಸ್ಮಾನಾಬಾದ್ ಜಿಲ್ಲೆಯ ಉಮರ್ ಗಾವ್ ತಹಸೀಲ್ ನಲ್ಲಿ ವಿಶೇಷ ತಪಾಸಣಾ ದಳ ವಶಪಡಿಸಿಕೊಂಡಿದೆ. ಒಸ್ಮಾನಾಬಾದ್ ಕಲೆಕ್ಟರ್ ನಾರ್ ಅವರು ಈ ಜಪ್ತಿಯನ್ನು ಖಚಿತಪಡಿಸಿದ್ದು ಕಾರನ್ನೂ ಅಲ್ಲೇ ಇರಿಸಿಕೊಂಡಿದ್ದಾರೆ.[ಹಣ ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಶಾಹಿ]

ಮುನ್ಸಿಪಲ್ ಚುನಾವಣೆಗಳ ಹಿನ್ನೆಲೆ ಅಕ್ರಮ ಹಣ ಸಾಗಣೆ ಮೇಲೆ ನಿಗಾ ಇಟ್ಟಿರುವ ವಿಶೇಷ ದಳವು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದಾಗ ಸಚಿವರಿಗೆ ಸೇರಿದ ಕಾರಿನಲ್ಲಿ ಹಣ ಪತ್ತೆಯಾಗಿದೆ.

ಸಂಸ್ಥೆಯ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಬಟವಾಡೆ ಮಾಡಲು ಹಣವನ್ನು ಕೊಂಡೊಯ್ಯಲಾಗುತ್ತಿದೆ ಎಂದು ಚಾಲಕ ಹೇಳಿಕೆ ನೀಡಿದ್ದು, ಸೂಕ್ತ ದಾಖಲೆ ಪತ್ರ ನೀಡಿಲ್ಲ. ತಪಾಸಣಾ ದಳದಿಂದ ಪೊಲೀಸರು ಮಾಹಿತಿ ಪಡೆದಿದ್ದು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In the middle of a nationwide scramble for cash after the ban on the two biggest currency notes, 91 lakhs were found in the car belonging to Maharashtra minister Subhash Deshmukh's organization.
Please Wait while comments are loading...