49 ಲಕ್ಷದಷ್ಟು ವಿದ್ಯುತ್ ಕಳವು, ನಟಿ ರತಿ ಅಗ್ನಿಹೋತ್ರಿ ದಂಪತಿ ವಿರುದ್ಧ ದೂರು

Posted By:
Subscribe to Oneindia Kannada

ಮುಂಬೈ, ಜನವರಿ 21: ಬಾಲಿವುಡ್ ನಟಿ ರತಿ ಅಗ್ನಿಹೋತ್ರಿ ಹಾಗೂ ಆಕೆ ಪತಿ ಅನಿಲ್ ವಿರ್ವಾನಿ ವಿರುದ್ಧ 48.96 ಲಕ್ಷ ರುಪಾಯಿಯಷ್ಟು ವಿದ್ಯುತ್ ಕಳ್ಳತನದ ಆರೋಪ ದಾಖಲಾಗಿದೆ. ಏಕ್ ದುಜೆ ಕೇಲಿಯೆ ಸಿನಿಮಾ ಖ್ಯಾತಿಯ ರತಿ ಅಗ್ನಿಹೋತ್ರಿ ಮತ್ತು ಆಕೆಯ ಆರ್ಕಿಟೆಕ್ಟ್ ಪತಿ ಸೇರಿ ವಿದ್ಯುತ್ ಮೀಟರ್ ಸರಿಯಾಗಿ ಕಾರ್ಯ ನಿರ್ವಹಿಸದಂತೆ ಮಾಡಿರುವ ಆರೋಪ ಮಾಡಲಾಗಿದೆ.

ಈ ದಂಪತಿ ಮುಂಬೈನ ವರ್ಲಿ ಪ್ರದೇಶದ ನೆಹರೂ ತಾರಾಲಯ ಸಮೀಪ ಇರುವ ಸ್ಟೆರ್ಲಿಂಗ್ ಸೀ ಫೇಸ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದಾರೆ. ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತ ಸಾಗಣೆ (ಬೆಸ್ಟ್) ವಿಚಕ್ಷಣಾ ಅಧಿಕಾರಿಗಳು ಅಪಾರ್ಟ್ ಮೆಂಟ್ ಗೆ ಭೇಟಿ ನೀಡಿದ ನಂತರ ಈ ಮಾಹಿತಿ ಗೊತ್ತಾಗಿದೆ.[ಜಗತ್ತಿನ ದುಬಾರಿ ನಗರಗಳಲ್ಲಿ ಮುಂಬೈಗೆ 2ನೇ ಸ್ಥಾನ!]

Rati Agnihotri

ಏಪ್ರಿಲ್ 2013ರಿಂದ ಅನಿಲ್ ವಿರ್ವಾನಿ 1,77,647 ಯೂನಿಟ್ ದುರುಪಯೋಗ ಮಾಡಿಕೊಂಡಿದ್ದಾರೆ. ಅದಕ್ಕೆ ಹಣ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.

ವರ್ಲಿ ಪೊಲೀಸ್ ಠಾಣೆಯಲ್ಲಿ ಅಗ್ನಿಹೋತ್ರಿ ಹಾಗೂ ಆಕೆಯ ಪತಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಹೆಚ್ಚಿನ ವಿಚಾರಣೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಡೆಪ್ಯೂಟಿ ಕಮಿಷನರ್ ಪ್ರವೀಣ್ ಪದ್ವಾಲ್ ತಿಳಿಸಿದ್ದಾರೆ.[ನಟಿ ಕರೀನಾ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ ವ್ಯಕ್ತಿ ಬಂಧನ]

ರತಿ ಅಗ್ನಿಹೋತ್ರಿ ಖ್ಯಾತಿ ಗಳಿಸಿದ ನಟಿ. ಕೂಲಿ, ಯಾದೇನ್ ನಂಥ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆಕೆ ನಟಿಸಿದ ಕೊನೆ ಸಿನಿಮಾ ಸಿಂಗ್ ಇಸ್ ಬ್ಲಿಂಗ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood actress Rati Agnihotri and husband Anil Virwani were booked in a case of electricity theft of Rs. 48.96 lakhs on Thursday at their residence, police said.
Please Wait while comments are loading...