ಅಮಾನವೀಯ ಘಟನೆ, ಜೈ ಶ್ರೀರಾಮ್ ಹೇಳದ ಮುಸ್ಲಿಂ ಕ್ಯಾಬ್ ಚಾಲಕನಿಗೆ ಥಳಿತ

ಥಾನೆ, ಜೂನ್ 28: ಜೈ ಶ್ರೀರಾಮ್ ಉಚ್ಛಾರ ಕುರಿತು ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಮುಸ್ಲಿಂ ಕ್ಯಾಬ್ ಚಾಲಕನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಥಳಿಸಿರುವ ಘಟನೆ ಮಹಾರಾಷ್ಟ್ರ ದ ಥಾನೆಯಲ್ಲಿ ನಡೆದಿದೆ.

ಜೈ ಶ್ರೀರಾಮ್ ಎಂದು ಹೇಳುವಂತೆ ಚಾಲಕನಿಗೆ ಮೂವರು ಒತ್ತಾಯಿಸಿದ್ದರು ಆದರೆ ಆತ ಹೇಳಲು ಒಪ್ಪದ ಕಾರಣ ಥಳಿಸಿದ್ದರು, ಈ ಕುರಿತು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಅವರ ವಿರುದ್ಧ ಐಪಿಸಿ ಸೆಕ್ಷನ್ 295( ಧಾರ್ಮಿಕ ಭಾವನೆಗಳಿಗೆ ಧಕ್ಕೆ) , 392(ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Muslim cab driver did not chant jai shri Ram and beaten up

ಒಟ್ಟು ನಾಲ್ಕೈದು ಮಂದಿಯ ಜತೆ ಜಗಳ ನಡೆದಿತ್ತು, ಜೈ ಶ್ರೀರಾಮ್ ಎಂದು ಹೇಳಲಿಲ್ಲ ಎಂದು ಥಳಿಸಿದ್ದಾರೆ ಎಂದು ಕ್ಯಾಬ್ ಚಾಲಕ ಫೈಜಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಾನು ಮುಸ್ಲಿಂ ಎಂದು ತಿಳಿದು ಅವರು ಈ ರೀತಿ ಮಾಡಿದ್ದಾರೆ.

ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು ಇನ್ನುಳಿದವರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈ ಶ್ರೀರಾಮ್ ಎಂದು ಹೇಳದ್ದಕ್ಕೆ ಮದರಸಾ ಶಿಕ್ಷಕರೊಬ್ಬರಿಗೆ ಥಳಿಸಿ ರೈಲಿನಿಂದ ಹೊರದಬ್ಬಿದ ಘಟನೆ ವರದಿಯಾಗಿತ್ತು. ಜೈಶ್ರೀರಾಮ್ ಎಂದು ಹೇಳದ ಯುವಕನ ಮೇಲೆ ಕಳ್ಳತನ ಆರೋಪ ಹೊರಿಸಿ ಯುವಕನ್ನು ಕೊಲೆ ಮಾಡಿದ ಘಟನೆ ಜಮ್ಷೆಡ್‌ಪುರದಲ್ಲಿ ಇತ್ತೀಚೆಗೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+