ಮದ್ವೆಯಾಗುವುದಾಗಿ ನಂಬಿಸಿ ಮೋಸ, ನಿರ್ದೇಶಕನ ಮೇಲೆ ಎಫ್ಐಆರ್

ಮುಂಬೈ, ಡಿ.1: ಮದುವೆಯಾಗುವುದಾಗಿ ನಂಬಿಸಿ ಮೋಸದಿಂದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಕ್ಯಾಸ್ಟಿಂಗ್ ನಿರ್ದೇಶಕನೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ. ಮುಂಬೈನ ವರ್ಸೋವಾ ಪೊಲೀಸರು ಈ ಕುರಿತಂತೆ ಎಫ್ಐಆರ್ ದಾಖಲಿಸಿದ್ದಾರೆ.

ಸಂತ್ರಸ್ತೆಯನ್ನು 26 ವರ್ಷ ವಯಸ್ಸಿನ ಕಿರುತೆರೆ ನಟಿ ಎಂದು ಗುರುತಿಸಲಾಗಿದ್ದು, ಆರೋಪಿತ ನಿರ್ದೇಶಕ, ಟಿವಿ, ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿದ್ದ ನಂತರ ಮದುವೆಯಾಗುವುದಾಗಿ ಹೇಳಿದ್ದ, ಆದರೆ, ನಟನೆ ಅವಕಾಶ ನೀಡಿಲ್ಲ, ಮದುವೆಯಾಗದೆ ಮೋಸ ಮಾಡಿದ್ದಲ್ಲದೆ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿಯನ್ನು ಆಯುಷ್​ ತಿವಾರಿ ಎಂದು ಗುರುತಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಂತ್ರಸ್ತೆ ಜೊತೆ ಪರಿಚಯದಲ್ಲಿದ್ದ ಎಂದು ತಿಳಿದು ಬಂದಿದೆ.

Mumbai: TV actress accuses casting director of rape

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್​ 376 (ಅತ್ಯಾಚಾರ)ದ ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ. ಇನ್ನು ಯಾರನ್ನು ಬಂಧಿಸಿಲ್ಲ, ತನಿಖೆ ಜಾರಿಯಲ್ಲಿದೆ ಎಂದು ವರ್ಸೋವಾ ಪೊಲೀಸ್​ ಠಾಣೆ ಹಿರಿಯ ಅಧಿಕಾರಿ ರಾಘವೇಂದ್ರ ಠಾಕೂರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+