ನಾನಾ ಪಾಟೇಕರ್ ರನ್ನು ಮಂಪರು ಪರೀಕ್ಷೆಗೊಳಪಡಿಸಿ: ತನುಶ್ರೀ

ಮುಂಬೈ, ಅಕ್ಟೋಬರ್ 14: ನಟ ನಾನಾ ಪಾಟೇಕರ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ತನುಶ್ರೀ ದತ್ತಾ ಅವರು ಮನವಿ ಸಲ್ಲಿಸಿದ್ದಾರೆ.

ದತ್ತಾ ಅವರ ಪರ ವಕೀಲ ನಿತಿನ್ ಸಾತಪುತೆ ಅವರು ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ಅರ್ಜಿ ಹಾಕಿದ್ದಾರೆ.

ನಟ ನಾನಾ ಪಾಟೇಕರ್, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀ ಸಿದ್ದಿಕಿ ಹಾಗೂ ನಿರ್ದೇಶಕ ರಾಕೇಶ್ ಸಾರಂಗ್ ಅವರಿಗೆ ನಾರ್ಕೊ ಅನಾಲಿಸ್, ಬ್ರೈನ್ ಮ್ಯಾಪಿಂಗ್ ಹಾಗೂ ಸುಳ್ಳು ಪತ್ತೆ ಪರೀಕ್ಷೆ ನಡೆಸಬೇಕು ಎಂದು ಅರ್ಜಿ ಹಾಕಲಾಗಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ನಟಿ ತನುಶ್ರೀ ದತ್ತಾ ಅವರು ನೀಡಿರುವ ಲೈಂಗಿಕ ಕಿರುಕುಳ ಆರೋಪದ ದೂರನ್ನು ಸ್ವೀಕರಿಸಿರುವ ಪೊಲೀಸರು, ನಾನಾ ಪಾಟೇಕರ್ ಹಾಗೂ ಗಣೇಶ್ ಆಚಾರ್ಯ ವಿರುದ್ಧ ಎಫ್ ಐಆರ್ ಹಾಕಿದ್ದಾರೆ.

MeToo: Tanushree Dutta demands Narco analysis of Nana Patekar and other accused

2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಚಿತ್ರದ ನೃತ್ಯ ಸನ್ನಿವೇಶ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಬಾಲಿವುಡ್​ ನಟಿ ತನುಶ್ರೀ ದತ್ತಾ ಮಾಡಿರುವ ಆರೋಪವನ್ನು ಹಿರಿಯ ನಟ, ನಿರ್ಮಾಪಕ ನಾನಾ ಪಾಟೇಕರ್ ಅವರು ನಿರಾಕರಿಸಿದ್ದಾರೆ.

ತನುಶ್ರೀ ದತ್ತಾ ಆರೋಪಕ್ಕೆ ನಾನಾ ಪಾಟೇಕರ್ ಕೊಟ್ಟ ಸ್ಪಷ್ಟನೆ ಏನು.?

ಓಶಿವಾರ ಠಾಣೆ ಪೊಲೀಸರು, ನಾನಾ ಪಾಟೇಕರ್ ಹಾಗೂ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 354, 509ಅನ್ವಯ ಬುಧವಾರ ರಾತ್ರಿ ಎಫ್ಐಆರ್ ಹಾಕಿದ್ದಾರೆ. ಸದ್ಯಕ್ಕೆ ತನಿಖೆ ಜಾರಿಯಲ್ಲಿದ್ದು, ಯಾರನ್ನು ಬಂಧಿಸಿಲ್ಲ, ಈ ಬಗ್ಗೆ ತನಿಖಾಧಿಕಾರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪಶ್ಚಿಮ ವಲಯ ಎಸಿಪಿ ಮನೋಜ್ ಕುಮಾರ್ ಶರ್ಮ ಹೇಳಿದ್ದಾರೆ.

ನಾನಾ ಪಾಟೇಕರ್ ಅವರ ವಕೀಲರು ಈಗಾಗಲೇ ತನುಶ್ರೀ ದತ್ತಾಗೆ ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ. ತನುಶ್ರೀಗಾಗಿ ಮರಾಠಿಯಲ್ಲಿದ್ದ ದೂರು, ನೋಟಿಸ್ ಗಳನ್ನು ಇಂಗ್ಲೀಷ್ ಗೆ ಅನುವಾದಿಸಿ ನೀಡಲಾಗಿದೆ. ಹೀಗಾಗಿ, ಎಫ್ಐಆರ್ ಹಾಕಲು ತಡವಾಗಿದೆ. ತನುಶ್ರೀ ಪರ ವಕೀಲರು 40 ಪುಟಗಳ ದೂರನ್ನು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೂ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+