ಕಾರಿನ ಭಯಕ್ಕೆ ನದಿಗೆ ಧುಮುಕಿದ ಹುಲಿ, ದಾರುಣ ಸಾವು
ಮುಂಬೈ, ನವೆಂಬರ್ 07: ಸೇತುವೆಯೊಂದರ ಮೇಲೆ ವೇಗವಾಗಿ ಬರುತ್ತಿದ್ದ ಎರಡು ಕಾರುಗಳನ್ನು ನೋಡಿ ಹೆದರಿದ ಹುಲಿಯೊಂದು ನದಿಗೆ ಹಾರಿ ದಾರುಣ ಸಾವು ಕಂಡ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
ನವೆಂಬರ್ ಆರರಂದು ಸೇತುವೆಯಿಂದ ಹಾರಿದ್ದ ಹುಲಿ ಕಲ್ಲುಗಳ ಮಧ್ಯೆ ಸಿಲುಕಿಕೊಂಡಿತ್ತು. ಅದನ್ನು ರಕ್ಷಿಸಲು ಹರಸಾಹಸ ಪಡಲಾಯ್ತಾದರೂ ಅದು ಕಲ್ಲುಗಳ ಮಧ್ಯೆಯಿಂದ ಹೊರಬರಲಾಗದೆ ಅಲ್ಲೇ ಸಾವು ಕಂಡಿದೆ.
ಚಂದ್ರಾಪುರದಿಂದ 27 ಕಿ.ಮೀ. ದೂರದಲ್ಲಿರುವ ಕುನಡಾ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಹುಲಿಯನ್ನು ರಕ್ಷಿಸಲು ಅದು ಇದ್ದ ಜಾಗಕ್ಕೆ ಪಂಜರವೊಂದನ್ನು ಇಳಿಬಿಡಲಾಗಿತ್ತು. ಆದರೆ ಅದು ಅದರೊಳಗೆ ಹತ್ತದೆ, ಅದನ್ನು ಕಚ್ಚಿ ಹಲ್ಲಿಗೆ ಗಾಯ ಮಾಡಿಕೊಂಡಿತು.
ಬುಧವಾರ ಸಂಜೆ ನದಿಗೆ ಹಾರಿದ್ದ ಹುಲಿ ಗುರುವಾರ ಬೆಳಗ್ಗೆಯ ಹೊತ್ತಿಗೆ ಯಾವುದೇ ಚಲನವಲನವಿಲ್ಲದ ಸ್ಥಿತಿಯಲ್ಲಿಲ್ಲದ್ದನ್ನು ಕಂಡು ಅನುಮಾನ ಬಂದು, ಪರೀಕ್ಷಿಸಿದಾಗ ಅದು ಸತ್ತಿರುವುದು ದೃಢವಾಗಿದೆ.












Click it and Unblock the Notifications