Get Updates
Get notified of breaking news, exclusive insights, and must-see stories!

ಗಣೇಶ ಉತ್ಸವಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ ಮಹಾರಾಷ್ಟ್ರ

ಮುಂಬೈ, ಜುಲೈ 11: ಗಣೇಶ ಉತ್ಸವ ಕುರಿತು ಮಹಾರಾಷ್ಟ್ರ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಗಸ್ಟ್ 22ನೇ ತಾರೀಕು ಗಣೇಶ ಉತ್ಸವ ಇರಲಿದ್ದು, ಮಹಾರಾಷ್ಟ್ರದಲ್ಲಿ ಈ ಹಬ್ಬ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತೆ. ಈ ವರ್ಷ ಕೊರೊನಾ ಭೀತಿಯ ನಡುವೇ ವಿನಾಯಕ ಉತ್ಸವಕ್ಕೆ ಸರ್ಕಾರ ಅನುಮತಿ ನೀಡಿದೆ.

Recommended Video

      Corona ವಿರುದ್ಧ R Ashok ಮಾಸ್ಟರ್ ಪ್ಲಾನ್ | Oneindia Kannada

      ಮಹಾರಾಷ್ಟ್ರ ಸರ್ಕಾರ ತಿಳಿಸಿರುವ ಪ್ರಕಾರ ಸಾರ್ವಜನಿಕವಾಗಿ ಕೂರಿಸುವ ಗಣೇಶನ ಎತ್ತರ ಗರಿಷ್ಠ 4 ಅಡಿಗೆ ನಿಗದಿ ಮಾಡಲಾಗಿದೆ. ನಾಲ್ಕು ಅಡಿಗಿಂತ ಎತ್ತರದ ಗಣೇಶ ಕೂರಿಸುವಂತಿಲ್ಲ. ಮನೆಗಳಲ್ಲಿ 2 ಅಡಿ ಗಣೇಶ ಕೂರಿಸಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.

      ಮಹಾರಾಷ್ಟ್ರದಲ್ಲಿ ವಿನಾಯಕ ಮಹೋತ್ಸವ ಸುಮಾರು 11 ದಿನಗಳವರೆಗೂ ನಡೆಯಲಿದೆ. ಹೀಗಾಗಿ, ತಿಂಗಳ ಮುಂಚೆಯೇ ಮಹಾ ಸರ್ಕಾರ ನಿಯಮಗಳನ್ನು ರೂಪಿಸಿದೆ.

      Maharashtra’s Home Department Issues Sops For Celebration Of Ganesh Festival

      * ಸಾರ್ವಜನಿಕವಾಗಿ ಕೂರಿಸುವ ಗಣಪತಿ ವಿಗ್ರಹವನ್ನು 4 ಅಡಿಗಳಿಗೆ ಸೀಮಿತಗೊಳಿಸಲಾಗಿದೆ. ಮನೆಯಲ್ಲಿ ಕೂರಿಸುವ ಗಣಪತಿ ವಿಗ್ರಹಗಳನ್ನು 2 ಅಡಿಗಳಿಗೆ ಸೀಮಿತಗೊಳಿಸಬೇಕು.

      * ಪೆಂಡಲ್‌ ಒಳಗೆ ಹತ್ತು ಜನರು ಮಾತ್ರ ಇರಲು ಅವಕಾಶ ನೀಡಲಾಗಿದೆ. ಅದಕ್ಕಿಂ ಹೆಚ್ಚು ಮಂದಿ ಪ್ರವೇಶಿಸುವಂತಿಲ್ಲ.

      * ಗಣೇಶ ವಿಸರ್ಜನೆ ಮಾಡುವ ವೇಳೆ ಹತ್ತಿರ ಕೆರೆ ಅಥವಾ ಸರ್ಕಾರ ಸೂಚಿಸುವ ಸ್ಥಳದಲ್ಲಿ ಮಾತ್ರ ವಿರ್ಸಜನೆ ಮಾಡಬೇಕು. ಅಥವಾ ಮುಂದಿನ ವರ್ಷಕ್ಕೆ ಗಣೇಶ ಉತ್ಸವವನ್ನು ಮುಂದೂಡಬಹುದು.

      * ಪೆಂಡಲ್ ಹಾಕುವ ಸ್ಥಳದಲ್ಲಿ ಡೆಂಗ್ಯೂ, ಮಲೇರಿಯಾ, ಕೊವಿಡ್ ಗೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸಬೇಕು.

      * ಗಣೇಶ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಆನ್‌ಲೈನ್‌ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸುವಂತಹ ವ್ಯವಸ್ಥೆ ಮಾಡಬೇಕು

      * ಆರತಿ, ಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳ ವೇಳೆ ಜನಸಂದಣಿ ಇರದಂತೆ ನೋಡಿಕೊಳ್ಳಬೇಕು

      * ಗಣೇಶ ತರುವ ವೇಳೆ, ವಿಸರ್ಜನೆ ವೇಳೆ ಮೆರವಣಿಗೆ ಮಾಡುವಂತಿಲ್ಲ. ವಿಸರ್ಜನೆ ಸ್ಥಳದಲ್ಲಿ ಜನರು ಕಡಿಮೆ ಭಾಗವಹಿಸಬೇಕು

      * ಈ ವೇಳೆ ನಗರಸಭೆಗಳು, ಪೊಲೀಸ್, ಸರ್ಕಾರಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳಿಗೆ ಎಲ್ಲರೂ ಸಮುದಾಯಗಳ ಜೊತೆ ಸಂಪರ್ಕ ಹೊಂದಿರಬೇಕು, ನಿಯಮಗಳನ್ನು ಪಾಲಿಸುವಂತೆ ಕ್ರಮ ಜರುಗಿಸಬೇಕು

      * ಇನ್ನು ಹೆಚ್ಚಿನ ಮಾರ್ಗಸೂಚಿಗಳನ್ನು ನೀಡಲಾಗುವುದು, ಅದನ್ನು ಅನುಸರಿಸಬೇಕು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+