ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ತಮ್ಮ ಮೇಲಿನ ದಾಳಿ ವಿರುದ್ಧ ತಿರುಗಿ ಬಿದ್ದ ವೈದ್ಯರು

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ವೈದ್ಯರ ಮೇಲೆ ನಡೆದ ದಾಳಿ ವಿರೋಧಿಸಿ ಅಲ್ಲಿನ ವೈದ್ಯ ಸಮುದಾಯ ಇಂದು ಭಾರೀ ಪ್ರತಿಭಟನೆ ನಡೆಸುತ್ತಿದೆ.

By Sachhidananda Acharya
|
Google Oneindia Kannada News

ಮುಂಬೈ, ಮಾರ್ಚ್ 20: ಇತ್ತೀಚೆಗೆ ಮಹಾರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲಿ ವೈದ್ಯರ ಮೇಲೆ ನಡೆದ ದಾಳಿ ವಿರೋಧಿಸಿ ಅಲ್ಲಿನ ವೈದ್ಯ ಸಮುದಾಯ ಇಂದು ಭಾರೀ ಪ್ರತಿಭಟನೆ ನಡೆಸುತ್ತಿದೆ.

ಮಹಾರಾಷ್ಟ್ರದಾದ್ಯಂತ ಹಲವು ಕಡೆಗಳಲ್ಲಿ ಇಂದು ವೈದ್ಯರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ವೈದ್ಯರು ತಮ್ಮ ಮೇಲಾಗುತ್ತಿರುವ ದಾಳಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.[ಬಾಲಿವುಡ್ ನಟಿ ಐಶ್ಚರ್ಯ ರೈ ಅವರಿಗೆ ಪಿತೃವಿಯೋಗ]

Maharashtra: Resident Doctors protest over recent incidents of assault

"ಕಳೆದ ಒಂದು ವಾರದಲ್ಲಿ ವೈದ್ಯರ ಮೇಲೆ ದಾಳಿ ನಡೆಸಿದ ನಾಲ್ಕು ನಿದರ್ಶನಗಳು ವರದಿಯಾಗಿವೆ. ನಾವು ಸುರಕ್ಷಿತವಾಗಿ ನಮ್ಮ ಕೆಲಸ ಮಾಡಬಹುದು ಎಂಬ ಭರವಸೆ ಸಿಗುವವರೆಗೆ ನಾವು ಕೆಲಸ ಮಾಡುವುದಿಲ್ಲ ಎಂದು," ನಿರಾಲಿ ಎಂಬ ವೈದ್ಯರು ತಿಳಿಸಿದ್ದಾರೆ.

"ಅನಾರೋಗ್ಯ ಪೀಡಿತರಿಗೆ ಸೇವೆ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ. ಆದರೆ ವಾತಾವರಣ ಸುರಕ್ಷಿತವಾಗಿಲ್ಲದೇ ಇದ್ದರೆ ಕೆಲಸ ಮಾಡುವುದು ಕಷ್ಟ," ಎಂದು ಸಿಯೋನ್ ಆಸ್ಪತ್ರೆಯ ವೈದ್ಯ ಡಾ ಲೊಕೇಶ್ ಹೇಳಿದ್ದಾರೆ.

Maharashtra: Resident Doctors protest over recent incidents of assault

ಇದೇ ಸಿಯೋನ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ವೈದ್ಯರ ಮೇಲೆ ರೋಗಿಯ ಸಂಬಂಧಿಕರು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ್ದರು. ಇಲ್ಲಿನ ಹೊರ ರೋಗಿ ವಿಭಾಗದ ಮುಂದೆ ವೈದ್ಯರು ಬೆಳಗ್ಗೆಯಿಂದ ಶಾಂತ ಪ್ರತಿಭಟನೆ ನಡೆಸುತ್ತಿದ್ದಾರೆ.

English summary
Maharashtra Association of Resident Doctors protest over recent incidents of assault against doctors. Doctors sitting on silent protest outside OPD at Sion Hospital after recent incidents of violence against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X