Breaking; ನವನೀತ್ ಕೌರ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕೋರ್ಟಿಗೆ

ಮುಂಬೈ, ಮೇ 08; ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರವಿ ರಾಣಾ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕೋರ್ಟ್‌ ಮೆಟ್ಟಿಲೇರಲಿದೆ. ದಂಪತಿಗಳ ಜಾಮೀನು ಅರ್ಜಿ ವಜಾಗೊಳಿಸುವಂತೆ ಸರ್ಕಾರ ಮನವಿ ಮಾಡಲಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸವ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಸಂಸದೆ ನವನೀತ್ ಕೌರ್ ಮತ್ತು ಆಕೆಯ ಪತಿ ರವಿ ರಾಣಾರನ್ನು ಪೊಲೀಸರು ಬಂಧಿಸಿದ್ದರು. ಮುಂಬೈ ಸೆಷನ್ಸ್‌ ಕೋರ್ಟ್‌ ಇಬ್ಬರಿಗೂ ಜಾಮೀನು ನೀಡಿತ್ತು.

ವಿಶೇಷ ಸರ್ಕಾರಿ ಅಭಿಯೋಜಕ ಪ್ರದೀಪ್ ಗರ್ಹತ್ ಈ ಕುರಿತು ಮಾಹಿತಿ ನೀಡಿದರು, "ಮಹಾರಾಷ್ಟ್ರ ಸರ್ಕಾರ ನವನೀತ್ ಕೌರ್ ಮತ್ತು ರವಿ ರಾಣಾ ಜಾಮೀನು ವಜಾಗೊಳಿಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ" ಎಂದರು.

Maharashtra Govt To Move Court Request Cancel Of Navneet Rana Bail

"ನ್ಯಾಯಾಲಯ ಜಾಮೀನು ನೀಡುವಾಗ ಹಾಕಿದ್ದ ಷರತ್ತುಗಳನ್ನು ನವನೀತ್ ಕೌರ್ ಮತ್ತು ರವಿ ರಾಣಾ ಉಲ್ಲಂಘಿಸಿದ್ದಾರೆ. ಈ ಕುರಿತು ಸೋಮವಾರ ಕೋರ್ಟ್‌ಗೆ ಮಾಹಿತಿ ನೀಡಲಾಗುತ್ತದೆ" ಎಂದು ಪ್ರದೀಪ್ ಗರ್ಹತ್ ಹೇಳಿದರು.

ಜಾಮೀನು ನೀಡುವಾಗ ಕೋರ್ಟ್‌ ಪ್ರಕರಣದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ಷರತ್ತು ಹಾಕಿತ್ತು. ಆದರೆ ದಂಪತಿಗಳು ಈ ಷರತ್ತು ಉಲ್ಲಂಘನೆ ಮಾಡಿದ್ದಾರೆ.

ಗುರುವಾರ ರವಿ ರಾಣಾ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಜೈಲಿನ ಅಧಿಕಾರಿಗಳು ತಮ್ಮ ಪತ್ನಿ ನವನೀತ್ ಕೌರ್ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಂಡಿಲ್ಲ ಎಂದು ಆರೋಪ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+