ಮಹಾರಾಷ್ಟ್ರ: 5 ಮಹಡಿ ಕಟ್ಟಡ ಕುಸಿತದಲ್ಲಿ ಒಬ್ಬ ಸಾವು, 70 ಜನರ ರಕ್ಷಣೆ

ಮುಂಬೈ, ಆಗಸ್ಟ್.25: ಮಹಾರಾಷ್ಟ್ರ ರಾಯಘಡ್ ಜಿಲ್ಲೆ ಮಹದ್ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದ ಘಟನೆಯಲ್ಲಿ ಇದುವರೆಗೂ ಒಬ್ಬರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಈಗಾಗಲೇ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

Maharashtra Building Collapse: 1 Dead, 60 Rescued, Rescue Operation Underway

ಮಹಾರಾಷ್ಟ್ರದ ಸಚಿವೆ ಅದಿಥಿ ತತ್ಕಾರೆ ಮತ್ತು ಏಕನಾಥ್ ಸಿಂಧೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅದಿಥಿ ತತ್ಕಾರೆ, 60 ಮಂದಿಯನ್ನು ರಕ್ಷಿಸಲಾಗಿದ್ದು, 30ಕ್ಕೂ ಹೆಚ್ಚು ಜನರು ಇನ್ನೂ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ ಎಂದರು.

Maharashtra Building Collapse: 1 Dead, 60 Rescued, Rescue Operation Underway

3 ಎನ್ ಡಿಆರ್ಎಫ್ ತಂಡದಿಂದ ಕಾರ್ಯಾಚರಣೆ:

ಮಹದ್ ಪ್ರದೇಶದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಅವಘಡದಲ್ಲಿ ಇದುವರೆಗೂ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಇನ್ನು ಕೆಲವರು ಗುಣಮುಖರಾಗಿದ್ದಾರೆ. ಸ್ಥಳದಲ್ಲಿ ಮೂರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಈ ಘಟನೆ ಕಾರಣದ ಕುರಿತು ತನಿಖೆ ನಡೆಸುವುದಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಬೇಕಿದೆ ಎಂದು ಅದಿಥಿ ತತ್ಕಾರೆ ತಿಳಿಸಿದ್ದಾರೆ. ಈ ಕಟ್ಟಡವನ್ನು ನಿರ್ಮಿಸಿ ಐದಾರು ವರ್ಷಗಳೇ ಕಳೆದಿದ್ದು, ಐದು ಅಂತಸ್ತಿನ ಕಟ್ಟಡದಲ್ಲಿ 40 ಫ್ಲಾಟ್ ಗಳಿದ್ದವು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+