ಕಪೂರ್ ಕುಟುಂಬದ ಆರ್ ಕೆ ಸ್ಟುಡಿಯೋ ಗೋದ್ರೇಜ್ ಸಂಸ್ಥೆ ಪಾಲು
ಮುಂಬೈ, ಅಕ್ಟೋಬರ್ 28: ಹಿಂದಿ ಚಿತ್ರರಂಗದ ಸಾವಿರಾರು ನೆನಪುಗಳನ್ನು ಹೊತ್ತುಕೊಂಡಿರುವ ಆರ್.ಕೆ. ಫಿಲಂಸ್ ಅಂಡ್ ಸ್ಟುಡಿಯೋವನ್ನು ಕೊಳ್ಳಲು ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಮುಂದಾಗಿದೆ. ಆರ್ ಕೆ ಸ್ಟುಡಿಯೋ ಮಾರಾಟದ ಬಗ್ಗೆ ಕಳೆದ ಆಗಸ್ಟ್ ತಿಂಗಳಿನಲ್ಲೇ ನಟ ರಿಷಿ ಕಪೂರ್ ಘೋಷಿಸಿದ್ದರು.
ಬರ್ಸಾತ್, ಜಾಗ್ತೇ ರಹೋ, ಆವಾರ. ಶ್ರೀ420, ಸಂಗಮ್, ಮೇರಾನಾಮ್ ಜೋಕರ್ ಮುಂತಾದ ಮಹೋನ್ನತ ಚಿತ್ರಗಳು ಇದೇ ಆರ್.ಕೆ. ಸ್ಟುಡಿಯೋದಲ್ಲಿ ಚಿತ್ರೀಕರಣ ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸ್ಟುಡಿಯೋವನ್ನು ಗೋದ್ರೇಜ್ ಪ್ರಾಪರ್ಟಿಸ್ 200 ಕೋಟಿ ರೂಪಾಯಿಗೆ ಖರೀದಿಸಲು ಮುಂದಾಗಿದೆ ಎಂದು ಲೈವ್ ಮಿಂತ್ ವರದಿ ಮಾಡಿದೆ.
ಕಪೂರ್ ಕುಟುಂಬ ಒಡೆತನದ ಆರ್.ಕೆ ಸ್ಟುಡಿಯೋಸ್ ಮಾರಾಟಕ್ಕಿದೆ.!
ಗೋದ್ರೇಜ್ ಗ್ರೂಪ್ ನ ರಿಯಲ್ ಎಸ್ಟೇಟ್ ವಿಭಾಗವು ಚೆಂಬೂರಿನಲ್ಲಿರುವ ಸ್ಟುಡಿಯೋಗೆ ಸೇರಿದ 2.2 ಎಕರೆ ಜಾಗವನ್ನು ಖರೀದಿಸುತ್ತಿದೆ. ಈಗಾಗಲೇ ಮುಂಗಡ ಪಾವತಿ ರೂಪದಲ್ಲಿ 150 ಕೋಟಿ ರು ನೀಡಲಾಗಿದೆ. ಕಪೂರ್ ಕುಟುಂಬದವರು 250 ಕೋಟಿ ರು ಮೌಲ್ಯ ಕೇಳಿದ್ದರು ಎಂಬ ಸುದ್ದಿಯಿದೆ.

ಭಾರತದ ಚಿತ್ರರಂಗದ ಶೋ ಮ್ಯಾನ್ ಎಂದೇ ಕರೆಸಿಕೊಳ್ಳುತ್ತಿದ್ದ ರಾಜ್ ಕಪೂರ್ ಅವರು 70 ವರ್ಷದ ಹಿಂದೆ ಈ ಸ್ಟುಡಿಯೋ ನಿರ್ಮಿಸಿದ್ದರು. ಸದ್ಯ ಇದರ ಮಾಲಿಕತ್ವ ರಣಬೀರ್ ಕಪೂರ್, ರಿಷಿ ಕಪೂರ್, ರಾಜೀವ್ ಕಪೂರ್, ರೀತು ನಂದಾ ಮತ್ತು ರೀಮಾ ಜೈನ್ ಅವರ ಹೆಸರಲ್ಲಿದೆ.
ಮಾರಾಟಕ್ಕಿರುವ ಪ್ರತಿಷ್ಟಿತ 'ಆರ್.ಕೆ.ಸ್ಟುಡಿಯೋಸ್' ಎಷ್ಟು ಬೆಲೆ ಬಾಳುತ್ತೆ ಗೊತ್ತೇ.?
ಸ್ಟುಡಿಯೋ ನಿರ್ವಹಿಸುವುದು ಕಷ್ಟ ಎಂದು ಕಪೂರ್ ಕುಟುಂಬ ಮಾರಾಟ ಮಾಡಲು ನಿರ್ಧರಿಸಿದೆ. ಮಾರಾಟದ ಬಗ್ಗೆ ಇನ್ನೂ ಸಂಪೂರ್ಣ ವಿವರಣೆ ನೀಡಲು ಸಾಧ್ಯವಿಲ್ಲ ಮಾತುಕತೆ ಜಾರಿಯಲ್ಲಿದೆ ಎಂದು ರಾಜ್ ಕಪೂರ್ ಅವರ ಪುತ್ರ ರಣಧೀರ್ ಕಪೂರ್ ಹೇಳಿದ್ದಾರೆ.

ಚೆಂಬೂರ್ ಪ್ರದೇಶದಲ್ಲಿ ಈಗ ರಿಯಲ್ ಎಸ್ಟೇಟ್ ವ್ಯವಹಾರ ಜೋರಾಗಿದೆ. ಇತ್ತೀಚೆಗೆ ಚೆಂಬೂರ್ ಏರಿಯಾದ 2 ಎಕರೆ ನಿವೇಶನವನ್ನು ಬೆಂಗಳೂರು ಮೂಲದ ಪುರುವಂಕರ ಲಿಮಿಟೆಡ್ ಅವರು 147ಕೋಟಿ ರು ನೀಡಿ ಖರೀದಿಸಿತ್ತು. ಕಳೆದ ವರ್ಷ ಪೆಪ್ಸಿಕೋ 2.3 ಎಕರೆ, ಡ್ಯೂಕ್ ಘಟಕವನ್ನು ವಾಧ್ವಾ ಸಮೂಹ 167 ಕೋಟಿ ರು ಗೆ ಖರೀದಿ ಮಾಡಿತ್ತು.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications