'ಐಎನ್ ಎಸ್ ಚೆನ್ನೈ' ಸಮರ ನೌಕೆ ದೇಶಕ್ಕೆ ಅರ್ಪಣೆ

Posted By:
Subscribe to Oneindia Kannada

ಮುಂಬೈ, ನವೆಂಬರ್.21: ಜಲಯುದ್ಧಗಳನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸೋಮವಾರ 'ಐಎನ್ ಎಸ್ ಚೆನ್ನೈ' ಸಮರ ನೌಕೆಯನ್ನು ಸೇವೆಗೆ ಅರ್ಪಿಸಿದರು.

ಇದರಿಂದಾಗಿ ಭಾರತದ ನೌಕಪಡೆಗೆ ಮತ್ತೊಂದು ಅತ್ಯಾಧುನಿಕ ಸಮರ ನೌಕೆಯೊಂದು ಸೇರಿ ಸೇನೆ ಬಲಿಷ್ಠವಾಗಿದೆ. ಹಾಗೆಯೇ ಜಲಗಾಮಿ ಸಮರಕ್ಕೆ ದೇಶವು ಮತ್ತಷ್ಟು ಬಲಿಷ್ಠವಾದಂತಾಗಿದೆ.['ಐಎನ್ಎಸ್ ಕೋಲ್ಕತ್ತಾ ಜೊತೆ ಮೋದಿ' ಚಿತ್ರಗಳು]

INS Chennai commissioned into Navy

ದೇಶದಲ್ಲಿಯೇ ನಿರ್ಮಾಣಗೊಂಡಿರುವ ಈ ನೌಕೆ ಇಂಡಿಯನ್ ನೇವಲ್ ಶಿಫ್(ಐಎನ್ ಎಸ್) ಚೆನ್ನೈ ನೌಕೆ 164 ಮೀಟರ್ ಉದ್ದ ಮತ್ತು 7,500 ಟನ್ ತೂಕ ಹೊಂದಿದೆ. ವೈರಿಗಳ ಕ್ಷಿಪಣಿ ನಾಶ, ಅನೇಕ ಕ್ಷಿಪಣಿಗಳನ್ನು ಹೊರುವ ಸಾರ್ಮಥ್ಯ, ಹೆಚ್ಚು ವೇಗ ಕ್ಷಮಿಸುವ ಶಕ್ತಿ, ಸಮರ ಕಾರ್ಯಾಚರಣೆಯನ್ನು ನಿಭಾಯಿಸುವ ದಕ್ಷತೆಯನ್ನು ಈ ನೌಕೆ ಹೊಂದಿದೆ.[ನೌಕಾ ಸೇನೆ ಸೇರಿದ 'ಭೀಮ' ಬಲದ ವಿಶೇಷಗಳೇನು?]

ಈ ನೌಕೆಯಲ್ಲಿ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳು, ಬರಾಕ್-8 ಕ್ಷಿಪಣಿಗಳಿವೆ. ಸಾಗರದ ಆಳದಲ್ಲಿ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ ನಾಶಪಡಿಸುವ ಅಸ್ತ್ರಗಳಾದ ಟಾರ್ಪೆಡೋ ಟ್ಯೂಬ್ ಲಾಂಚರ್ ಹೊಂದಿದೆ.

ಸಾಗರದಲ್ಲಿ ನಡೆಯುವ ವಾಯು ಮತ್ತು ಜಲಮಾರ್ಗಗದ ಎಲ್ಲ ಆಕ್ರಮಗಳನ್ನು ಎದುರಿಸುವ ಸಾಮರ್ಥ್ಯ ಐಎನ್ ಎಸ್ ಚೆನ್ನೈ ಹೊಂದಿದೆ.

'ಐಎನ್ ಎಸ್ ಕೊಲ್ಕತ್ತಾ' ಯುದ್ದ ನೌಕೆಯನ್ನು ಆ.16.2014ರಲ್ಲಿ, 'ಐಎನ್ಎಸ್ ಕೋಚಿ' ನೌಕೆಯನ್ನು ಸೆ.30.2015ರಲ್ಲಿ ಸಮರ್ಪಿಸಲಾಗಿತ್ತು. ಅದರೊಂದಿಗೆ ಐಎನ್ ಎಸ್ ಚೆನ್ನೈ ನೌಕೆಯನ್ನು 2016 ಸೇರ್ಪಡೆಯಾಗಿರುವುದು ನೌಕಾಬಲವನ್ನು ಹೆಚ್ಚಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defence Minister Manohar Parrikar today commissioned 'INS Chennai', the third indigenously designed guided missile destroyer in the Kolkata class, here.
Please Wait while comments are loading...