ಮುಂಬೈನಲ್ಲಿ ಮಳೆ ಅಬ್ಬರ; ರೆಡ್ ಅಲರ್ಟ್ ಘೋಷಣೆ

ಮುಂಬೈ, ಜೂನ್ 12: ಮುಂಬೈ ಹಾಗೂ ಮುಂಬೈಗೆ ಹೊಂದಿಕೊಂಡಿರುವ ಹಲವು ಪ್ರದೇಶಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ ಸೂಚನೆ ನೀಡಲಾಗಿದ್ದು, ಜೂನ್ 13ರಂದು ರೆಡ್‌ ಅಲರ್ಟ್ ಘೋಷಿಸಲಾಗಿದೆ.

ಜೂನ್ 13 ಹಾಗೂ 14ರಂದು ಮುಂಬೈ ನಗರ ಹಾಗೂ ಥಾಣೆ, ರಾಯಗಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ವಿಪತ್ತು ನಿರ್ವಹಣಾ ತಂಡಗಳಿಗೆ ಸಿದ್ಧವಾಗಿರಲು ಸೂಚಿಸಲಾಗಿದೆ. ಶನಿವಾರ ಆರೆಂಜ್ ಅಲರ್ಟ್ ಹಾಗೂ ಭಾನುವಾರ ರೆಡ್ ಅಲರ್ಟ್ ಘೋಷಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಒತ್ತಡ ಸೃಷ್ಟಿಯಾಗಿರುವುದರಿಂದ ಭಾರೀ ಮಳೆಯ ಸೂಚನೆ ನೀಡಿದ್ದು, ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಎಚ್ಚರಿಕೆ ನೀಡಲಾಗಿದೆ. ಜೂನ್ 10-11ರವರೆಗೆ 100 ಮಿ.ಮೀ ಮಳೆ ದಾಖಲಾಗಿದೆ.

IMD Issues Red Alert For Mumbai Forecasting Heavy Rainfall

"ಕರಾವಳಿ ಕಾವಲು ಪಡೆ, ನೌಕಾಪಡೆ ಹಾಗೂ ಎನ್‌ಡಿಆರ್ಎಫ್ ಸಿಬ್ಬಂದಿಯೂ ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿದ್ದಾರೆ" ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 6 ಕಂಟ್ರೋಲ್ ರೂಂಗಳಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ. ಎಚ್ಚರಿಕೆ ನೀಡಲಾಗಿರುವ ಹಲವು ಪ್ರದೇಶಗಳಲ್ಲಿ ಪಂಪಿಂಗ್ ಕೇಂದ್ರಗಳನ್ನು ಅಳವಡಿಸಲಾಗಿದೆ. ಸಮುದ್ರ ತೀರಗಳಿಗೆ ಹೋಗದಂತೆ ಜನರಿಗೆ ಸೂಚನೆ ನೀಡಲಾಗಿದೆ. ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದಲೂ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನೂ ನಾಲ್ಕೈದು ದಿನ ಮಳೆ ಮುಂದುವರೆಯುವ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+