ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ICAI ಮುಖ್ಯಸ್ಥ ನಿಲೇಶ್ ಪುತ್ರಿ ಪಲ್ಲವಿ ಶವ ಪತ್ತೆ

By Mahesh
|
Google Oneindia Kannada News

ಮುಂಬೈ, ಅಕ್ಟೋಬರ್ 06: ನಾಪತ್ತೆಯಾಗಿದ್ದ ಭಾರತೀಯ ಚಾರ್ಟರ್ಡ್‌‌ ಅಕೌಂಟೆಂಟ್ಸ್‌‌ ಸಂಸ್ದೆ (ICAI) ಮುಖ್ಯಸ್ಥ ನಿಲೇಶ್ ವಿಕಾಮ್ಸೆಯ್‌ ಪುತ್ರಿ ಪಲ್ಲವಿ ವಿಕಾಮ್ಸೆಯ್ ಶವವಾಗಿ ಪತ್ತೆಯಾಗಿದ್ದಾಳೆ.

ಇಲ್ಲಿನ ಪರೆಲ್‌ ಮತ್ತು ಕುರ್ರಿ ರೈಲ್ವೆ ಹಳಿ ಮೇಲೆ ಪಲ್ಲವಿ ಮೃತ ದೇಹ ಪತ್ತೆಯಾಗಿದೆ. ಕಾನೂನು ಪದವಿ ಓದುತ್ತಿದ್ದ 20 ವರ್ಷದ ಪಲ್ಲವಿ ದಕ್ಷಿಣ ಮುಂಬೈನ ಕಾನೂನು ಸಂಸ್ಥೆಗೆ ಇಂಟರ್ನ್‌ಶಿಪ್‌ಗೆಂದು ಹೋಗಿದ್ದಳು. ಆದರೆ, ಬುಧವಾರ ಸಂಜೆ ಪಲ್ಲವಿ ಮನೆಗೆ ವಾಪಸ್‌ ಬಂದಿರಲಿಲ್ಲ. ಪಲ್ಲವಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ICAI President's daughter found dead on railway tracks

ಸಿಎಸ್ ಎಂಟಿ ಸ್ಟೇಷನ್ ನಲ್ಲಿ ಗುರುವಾರ ಸಂಜೆ ಲೋಕಲ್ ಟ್ರೈನ್ ಹತ್ತಿರುವ ಬಗ್ಗೆ ಸುಳಿವು ಸಿಕಿದೆ ಎಂದು ದಾದರ್ ಜಿ ಆರ್ ಪಿ ಅಧಿಕಾರಿ ಹೇಳಿದ್ದಾರೆ.

ಪಲ್ಲವಿ ಶವ ರೈಲ್ವೆ ಹಳಿ ಮೇಲೆ ಬಿದ್ದಿದೆ ಎಂದು ಪರೆಲ್‌ ರೈಲ್ವೆ ಮಾಸ್ಟರ್‌ಗೆ ಫೋನ್‌ ಕರೆ ಬಂದಿದೆ. ಶವವನ್ನು ಗುರುತಿಸಲಾಗಿದ್ದು, ಪಲ್ಲವಿ ಶವದ ತಲೆ ಸೇರಿದಂತೆ ಮೃತದೇಹದ ಅನೇಕ ಕಡೆ ಗಾಯದ ಗುರುತುಗಳಿವೆ ಎಂದು ರೈಲ್ವೆ ಡಿಸಿಪಿ ಸಮಾಧನ್ ಪವಾರ್ ತಿಳಿಸಿದ್ದಾರೆ.

English summary
A 20-year-old female's body was found on railway tracks Wednesday evening in Mumbai between the Parel and Curry Road stations. The woman has been identified as Pallavi Vikamsey, the daughter of the President of Institute of Chartered Accountants of India (ICAI), Nilesh Vikamsey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X