ಮುಂಬೈ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು ಎಂದ ವ್ಯಕ್ತಿಗೆ ಹೈಕೋರ್ಟ್ ದಂಡ
ಬೆಂಗಳೂರು, ಆಗಸ್ಟ್ 23 : ದೇಶವನ್ನೇ ತಲ್ಲಣಗೊಳಿಸಿದ್ದ ಮುಂಬೈ ಭಯೋತ್ಪಾದಕರ ದಾಳಿ ವಿಚಾರ ತನಗೇ ಮೊದಲೇ ಗೊತ್ತಿತ್ತು ತಾನು ಹೇಳಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಕಾಂಗ್ರೆಸ್ ಮುಖಂಡ ಹರಿಶ್ಚಂದ್ರಗೌಡಗೆ ಭಾರಿ ಮುಖಭಂಗ ಉಂಟಾಗಿದೆ.
2008ರಲ್ಲಿ ಮುಂಬೈನಲ್ಲಿ ತಾಜ್ ಹೋಟೆಲ್ ಮೇಲೆ ನಡೆದಿದ್ದ ಭಯೋತ್ಪಾದಕರ ದಾಳಿ ವಿಚಾರ ತನಗೆ ಮೊದಲೇ ತಿಳಿದಿತ್ತು, ಕುರಿತಂತೆ ಮಹಾರಾಷ್ಟ್ರ ಗೃಹ ಇಲಾಖೆಗೆ ಮೊದಲೇ ತಿಳಿಸಿದ್ದೆ, ಆದರೂ ಇದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲವಾದರು.
ಇದರ ವಿರುದ್ಧ ತನಿಖೆ ವಿಧಿಸಬೇಕು ಎಂದು ಕೋರಿ ಹರಿಶ್ಚಂದ್ರಗೌಡ ಹೈಕೋರ್ಟ್‌ನಲ್ಲಿ ಪಿಎಎಲ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಹರಿಶ್ಚಂದ್ರಗೌಡ ಅವರ ವಾದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ 5 ಸಾವಿರ ರೂ ದಂಡ ವಿಧಿಸಿದೆ.ದಂಡದ ಮೊತ್ತವನ್ನು ಪ್ರವಾಹ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸುವಂತೆ ಪೀಠ ಸೂಚಿಸಿದೆ.

ಈ ರೀತಿ ತರ್ಕ ರಹಿತ ವಿಚಾರಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯ ಹಾಗೂ ಸರ್ಕಾರದ ಕಾಲ ಹರಣ ಮಾಡದಂತೆ ಎಚ್ಚರಿಕೆ ನೀಡಿದೆ.












Click it and Unblock the Notifications