ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ!

|
Google Oneindia Kannada News

ಮುಂಬೈ, ನವೆಂಬರ್ 19: ಮರಾಠಿಗರ ಬಹುಕಾಲದ ಬೇಡಿಕೆಗೆ ಕೊನೆಗೂ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರವು ಮಣಿದಿದೆ. ಮರಾಠಾ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮೀಸಲಾತಿ ಕಾಯ್ದೆಗೆ ಸಂಪುಟದಲ್ಲಿ ಸಮ್ಮತಿ ಸಿಕ್ಕಿದೆ.

ಲೋಕಸಭೆ ಚುನಾವಣೆಗೂ ಮುನ್ನ ಮೀಸಲಾತಿ ನೀಡಿರುವುದು ರಾಜಕೀಯ ಉದ್ದೇಶದಿಂದಲೂ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರಕ್ಕೆ ಶುಭದಾಯಕವಾಗಿ ಪರಿಣಮಿಸಬಹುದಾಗಿದೆ.

ಮಹಾರಾಷ್ಟ್ರ ಬಂದ್‌: ಉದ್ಯೋಗ, ಶಿಕ್ಷಣ ಮೀಸಲಿಗೆ ಮರಾಠಿಗರ ಪಟ್ಟು ಮಹಾರಾಷ್ಟ್ರ ಬಂದ್‌: ಉದ್ಯೋಗ, ಶಿಕ್ಷಣ ಮೀಸಲಿಗೆ ಮರಾಠಿಗರ ಪಟ್ಟು

ಮೀಸಲಾತಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಈ ತಿಂಗಳಿನಲ್ಲೇ ಮುಗಿಸಲಾಗುತ್ತಿದೆ. ಡಿಸೆಂಬರ್ 01ರಿಂದ ಮೀಸಲಾತಿ ಜಾರಿಗೆ ಬರಲಿದೆ ಎಂದು ಸಿಎಂ ಫಡ್ನವೀಸ್ ಹೇಳಿದ್ದಾರೆ.

Devendra Fadnavis government gives nod for Maratha quota in Maharashtra

ಮಹಾರಾಷ್ಟ್ರದಲ್ಲಿ ಈಗಾಗಲೇ ಶೇ 52 ಮೀಸಲಾತಿ ಇದ್ದು, ಮರಾಠಾ ಸಮುದಾಯಕ್ಕೆ ಶೇ 16 ಮೀಸಲು ಸಿಗುವ ಸಾಧ್ಯತೆಯಿದೆ. ಒಟ್ಟಾರೆ, ಮೀಸಲಾತಿ ಪ್ರಮಾಣ ಶೇ68ಕ್ಕೆ ತಲುಪಲಿದೆ.

ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನವೆಂಬರ್ 25, 26ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಈಗ ಡಿಸೆಂಬರ್ 01ರಂದು ಇವರೆಲ್ಲರೂ ಸಂಭ್ರಮಿಸಬಹುದು ಎಂದು ಫಡ್ನವೀಸ್ ಹೇಳಿದರು.

ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು

ಎಸ್ ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಮರಾಠಾ ಸಮುದಾಯದ ನಡುವೆ ಗೊಂದಲ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ, ಸಂವಿಧಾನದ ಪ್ರಕಾರ ನೀಡಬೇಕಾದ ಮೀಸಲಾತಿಗೆ ನಾವು ಬದ್ಧವಾಗಿದ್ದೇವೆ ಎಂದು ಫಡ್ನವೀಸ್ ತಿಳಿಸಿದರು.

English summary
The Devendra Fadnavis-led government in Maharashtra today passed the Maratha Reservation Bill. The report and Bill regarding the same will likely be tabled during the Winter Parliament Session of the Legislative Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X