• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳ ಬಳಿಯೇ ರೋಗಿಗಳಿಗೆ ಚಿಕಿತ್ಸೆ

|

ಮುಂಬೈ, ಮೇ 7: ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳ ಬಳಿಯೇ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

   ಬೆಂಗಳೂರಿನಿಂದ ನಡೆದುಕೊಂಡೇ ಉತ್ತರಪ್ರದೇಶಕ್ಕೆ ಹೋಗ್ತಿದ್ದಾರೆ ವಲಸೆ ಕಾರ್ಮಿಕರು | UP | Oneindia Kannada

   ನಗರದ ಮಹಾನಗರ ಪಾಲಿಕೆಯಿಂದ ನಡೆಸುತ್ತಿರುವ ಸಿಯೋನ್ ಆಸ್ಪತ್ರೆಯಲ್ಲಿ ಈ ಭಯಯಾನಕ ದೃಶ್ಯ ಗೋಚರಿಸಿದೆ. ಪಕ್ಕದ ಹಸಿಗೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕಾರಣ ವಾರ್ಡ್‌ನಲ್ಲಿ ಕನಿಷ್ಠ ಏಳು ಮೃತದೇಹಗಳನ್ನು ಇರಿಸಲಾಗಿದೆ.

   ಕೆಲವು ರೋಗಿಗಳನ್ನು ಕುಟುಂಬ ಸದಸ್ಯರೇ ನೋಡಿಕೊಳ್ಳುತ್ತಿರುವ ಕಾರಣ ತಮ್ಮ ಬೆನ್ನ ಹಿಂದೆಯೇ ಇರುವ ಶವವನ್ನು ಕಂಡು ಕಾಣದಂತೆ ಇದ್ದಾರೆ.

   ಮುಂಬೈನಿಂದ ಮಂಡ್ಯಕ್ಕೆ ಶವ ತಂದಿದ್ದ ಕುಟುಂಬದವರಲ್ಲಿ ಕೊರೊನಾ!

   ದೇಶದಲ್ಲಿ ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಿವೆ. ಈಗಾಗಲೇ 16,800 ಪ್ರಕರಣಗಳು ದಾಖಲಾಗಿದೆ. ಮುಂಬೈನಲ್ಲಿ 10,714 ಸೋಂಕಿತರದ್ದಾರೆ.. 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

   ಮಹಾರಾಷ್ಟ್ರ ಶಾಸಕ ವಿಡಿಯೋ ಪೋಸ್ಟ್

   ಮಹಾರಾಷ್ಟ್ರ ಶಾಸಕ ವಿಡಿಯೋ ಪೋಸ್ಟ್

   ಮಹಾರಾಷ್ಟ್ರ ವಿಪಕ್ಷ ಬಿಜೆಪಿಯ ಶಾಸಕ ನಿತೇಶ್ ರಾಣೆ ಬುಧವಾರ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು, ಸಿಯೋನ್ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಮೃತದೇಹಗಳ ಬಳಿಯೇ ಮಲಗಿಸಿದ್ದಾರೆ, ಇದುಯಾವ ರೀತಿಯ ಆಡಳಿತ, ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಸಂಬಂಧಿಕರು ಶವ ಪಡೆಯಲು ಹಿಂಜರಿಯುತ್ತಿದ್ದಾರೆ

   ಸಂಬಂಧಿಕರು ಶವ ಪಡೆಯಲು ಹಿಂಜರಿಯುತ್ತಿದ್ದಾರೆ

   ಸಿಯೋನ್ ಆಸ್ಪತ್ರೆ ಡೀನ್ ಪ್ರಮೋದ್ ಮಾತನಾಡಿ, ಕೊವಿಡ್‌ನಿಂದ ಮೃತಪಟ್ಟವರ ಶವಗಳನ್ನು ಸ್ವೀಕರಿಸಲು ಹಂಜರಿಯುತ್ತಿದ್ದಾರೆ. ಶವಗಳನ್ನು ಗಮನಿಸದೆ ಅಲ್ಲಿಡಲು ಅದೂ ಕಾರಣವಾಗಿದೆ.ಶವಗಳನ್ನು ಈಗ ಅಲ್ಲಿಂದ ತೆಗೆಯಲಾಗಿದೆ.

   ಶಾವಾಗಾರಕ್ಕೆ ಏಕೆ ಶವಗಳನ್ನು ರವಾನಿಸಿಲ್ಲ

   ಶಾವಾಗಾರಕ್ಕೆ ಏಕೆ ಶವಗಳನ್ನು ರವಾನಿಸಿಲ್ಲ

   ಆಸ್ಪತ್ರೆಯ ಶವಾಗಾರದಲ್ಲಿ 15 ಸ್ಲಾಟ್‌ಗಳಿದ್ದು ಈಗಾಗಲೇ 11 ಭರ್ತಿ ಯಾಗಿದೆ. ನಾವು ಎಲ್ಲಾ ಮೃತದೇಹಗಳನ್ನು ಅಲ್ಲಿಗೆ ಸಾಗಿಸಿದರೆ ಕೊವಿಡ್‌ನಿಂದ ಮೃತಪಡದ ಶವಗಳನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಲು ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.

   ಚೀಲದೊಳಗೆ ಶವ ಪ್ಯಾಕ್ ಮಾಡಿದರೆ ಸೋಂಕು ಹರಡುವುದಿಲ್ಲ

   ಚೀಲದೊಳಗೆ ಶವ ಪ್ಯಾಕ್ ಮಾಡಿದರೆ ಸೋಂಕು ಹರಡುವುದಿಲ್ಲ

   ಒಮ್ಮೆ ಶವವನ್ನು ಚೀಲದೊಳಗೆ ಪ್ಯಾಕ್ ಮಾಡಿದ ಬಳಿಕ ಸೋಂಕು ಹರಡುವ ಸಾಧ್ಯತೆ ಇಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸ್ಪಷ್ಟೀಕರಣವು ಶವಗಳ ಪಕ್ಕದಲ್ಲಿ ಮಲಗಿದ್ದ ರೋಗಿಗಳ ಭಯಾನಕತೆಯನ್ನು ಸ್ವಲ್ಪ ಕಡಿಮೆ ಮಾಡಿದೆ.

   English summary
   A video shot on a phone shows coronavirus patients in a Mumbai hospital ward lying next to corpses wrapped in body bags. The horrifying clip, which is circulating on social media, is from Sion Hospital, which is run by the city's municipal corporation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X