ಸಂಪುಟ ವಿಸ್ತರಣೆಯ ಅಸಮಾಧಾನದ ಜ್ವಾಲೆ: ಮುಖ್ಯಮಂತ್ರಿ ತಬ್ಬಿಬ್ಬು
ಅದೇನು ಬಿಜೆಪಿ ಮೇಲೆ ಶಿವಸೇನೆಯ ಈ ಮುಖಂಡನಿಗೆ ಸಿಟ್ಟಿತ್ತೋ ಗೊತ್ತಿಲ್ಲ. ಸಮಯ ಸಿಕ್ಕಾಗಲೆಲ್ಲಾ, ಸಂದರ್ಭ ಬಂದಾಗಲೆಲ್ಲಾ, ಮೋದಿ, ಶಾ ಅವರನ್ನು ಕಟುವಾದ ಶಬ್ದದಿಂದ ಟೀಕಿಸುತ್ತಿದ್ದ ಶಿವಸೇನೆಯ ಪ್ರಮುಖ ಪಂಕ್ತಿಯಲ್ಲಿ ಬರುವಂತಹ ನಾಯಕನೇ ಉದ್ಧವ್ ಠಾಕ್ರೆಯ ವಿರುದ್ದ ಸಿಟ್ಟಾಗಿದ್ದಾರೆ.
ಪಕ್ಷ ಪಕ್ಷ ಎನ್ನುತ್ತಿದ್ದ ಮುಖಂಡರೋರ್ವರು, ಈಗ ಪಕ್ಷ ಬಿಡುವ ಮಾತನ್ನಾಡುತ್ತಿದ್ದಾರೆ. ಜ್ಯೂನಿಯರ್ ಠಾಕ್ರೆಗೆ ಸಿಎಂ ಹುದ್ದೆ ಬಯಸದೇ ಬಂದದ್ದು. ತಮ್ಮ ಪಕ್ಷದ ಮುಖಂಡನ ಬಹಿರಂಗ ಅಸಮಾಧಾನ ಈಗ ಅವರಿಗೆ ನುಂಗಲೂ ಆಗದೇ, ಉಗುಳಲೂ ಆಗದೇ ಬಿಸಿತುಪ್ಪದಂತಾಗಿದ್ದಾರೆ ಸಂಜಯ್ ರಾವತ್.
ಮೊನ್ನೆ (ಡಿ 30) ಮಹಾರಾಷ್ಟ್ರ ಸರಕಾರದ ಸಂಪುಟ ವಿಸ್ತರಣೆಯಾಯಿತು. ನಿರೀಕ್ಷೆಯೆಂತೆ ಅಧಿಕೃತವಾಗಿ ಎನ್ಸಿಪಿಯ ಅಜಿತ್ ಪವಾರ್ ಡಿಸಿಎಂ ಆದರು. ಆದರೆ, ಅದರಲ್ಲಿ ಸಂಜಯ್ ರಾವತ್ ಬಯಸಿದ್ದ ಹೆಸರಿಲ್ಲ.
ಈ ಕಾರಣಕ್ಕಾಗಿ ಸಿಟ್ಟಾಗಿರುವ ರಾವತ್, ಸಂಪುಟ ವಿಸ್ತರಣೆಯ ಕಾರ್ಯಕ್ರಮದಲ್ಲೂ ಗೈರಾಗಿ, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರಾವತ್ ಅವರ ಈ ನಡೆ, ಮುಖ್ಯಮಂತ್ರಿಯಾದಿಯಾಗಿ ಎಲ್ಲರನ್ನೂ ತಬ್ಬಿಬ್ಬುಗೊಳಿಸಿದೆ.

ಶಿವಸೇನೆ - ಎನ್ಸಿಪಿ - ಕಾಂಗ್ರೆಸ್ ಮೈತ್ರಿ
ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ಶಿವಸೇನೆ ಖಾತೆ ಹಂಚಿಕೆ/ಸಿಎಂ ಗಾದಿ ವಿಚಾರದಲ್ಲಿ ಕ್ಯಾತೆ ತೆಗೆದಿದ್ದರಿಂದ, ಚುನಾವಣಾಪೂರ್ವ ಮೈತ್ರಿ ಮುರಿದು ಬಿದ್ದಿತ್ತು. ಆ ವೇಳೆ, ಸಂಜಯ್ ರಾವತ್, ಶಿವಸೇನೆ - ಎನ್ಸಿಪಿ - ಕಾಂಗ್ರೆಸ್ ಮೈತ್ರಿಯ ವಿಚಾರದಲ್ಲಿ ಸಂಜಯ್ ರಾವತ್ ಪ್ರಮುಖ ಪಾತ್ರವಹಿಸಿದ್ದರು.

ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ
ಸೋಮವಾರ (ಡಿ 30) ನಡೆದ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಿವಸೇನೆಯ ಹನ್ನೊಂದು ಶಾಸಕರು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಶಿವಸೇನೆಯ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್, ತಮ್ಮ ಕುಟುಂಬದವರಿಗಾಗಿ, ಸಚಿವ ಸ್ಥಾನಕ್ಕೆ ಭಾರೀ ಲಾಬಿ ನಡೆಸಿದ್ದರು. (ಚಿತ್ರ:ಪಿಟಿಐ)

ಸಂಜಯ್ ರಾವತ್
ಸಂಜಯ್ ರಾವತ್ ತಮ್ಮ ಸಹೋದರ, ವಿಖ್ರೋಲಿ ಶಾಸಕ ಸುನಿಲ್ ರಾವತ್ ಅವರಿಗೆ ಸಚಿವಸ್ಥಾನ ನೀಡಬೇಕೆಂದು ಒತ್ತಡ ಹೇರಿದ್ದರು. ಮುಖ್ಯಮಂತ್ರಿ ಠಾಕ್ರೆ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಲ್ಲೂ ಈ ಬಗ್ಗೆ ಒತ್ತಡವನ್ನು ಹೇರಿದ್ದರು. ಆದರೆ, ಅದ್ಯಾವುದು ಫಲ ನೀಡಲಿಲ್ಲ. (ಚಿತ್ರ:ಪಿಟಿಐ)

ಸಂಪುಟ ವಿಸ್ತರಣೆಯ ವೇಳೆ ಅಸಮಾಧಾನದ ಜ್ವಾಲೆಗೆ ಸಿಎಂ ತಬ್ಬಿಬ್ಬು
ಸಹೋದರನಿಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಸಂಜಯ್ ರಾವತ್, ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಠಾಕ್ರೆಗೆ ಇದೊಂದು ಸಮಸ್ಯೆಯಾದರೆ, ಶಿವಸೇನೆಯ ಹಲವು ಶಾಸಕರು, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. (ಚಿತ್ರ:ಪಿಟಿಐ)

ತುರ್ತಾಗಿ ಮುಖ್ಯಮಂತ್ರಿ ಮನವೊಲಿಸಲು ಮುಂದಾದ ಸಿಎಂ
ಸಿಎಂ ಠಾಕ್ರೆ ತಮ್ಮ ಪುತ್ರ ಆದಿತ್ಯ ಠಾಕ್ರೆಗೆ ಸ್ಥಾನ ನೀಡುವ ಸಲುವಾಗಿ ಸುನಿಲ್ ರಾವತ್ ಆವರನ್ನು ಕೊನೇ ಕ್ಷಣದಲ್ಲಿ ಕೈಬಿಟ್ಟರು ಎಂದು ಹೇಳಲಾಗುತ್ತದೆ. ಸಂಜಯ್ ರಾವತ್, ಶಿವಸೇನೆಯ ಪ್ರಮುಖ ಮುಖಂಡರಾಗಿರುವುದರಿಂದ, ಮುಖ್ಯಮಂತ್ರಿ ಇವರನ್ನು ತುರ್ತಾಗಿ ಮನವೊಲಿಸಲು ಮುಂದಾಗಿದ್ದಾರೆ.












Click it and Unblock the Notifications