Get Updates
Get notified of breaking news, exclusive insights, and must-see stories!

ನೀರವ್ ಮೋದಿಗಾಗಿ ಕಾದಿದೆ ಆರ್ಥರ್ ರಸ್ತೆ ಜೈಲಿನ ಬರಾಕ್ 12

ಮುಂಬೈ, ಜೂನ್ 12: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣದ ಪ್ರಮುಖ ಆರೋಪಿ, ಉದ್ಯಮಿ ನೀರವ್ ಮೋದಿ ಅವರಿಗಾಗಿ ಆರ್ಥರ್ ರಸ್ತೆಯ ಬರಾಕ್ ಸಂಖ್ಯೆ 12 ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತ ತೊರೆದು ಯುನೈಟೆಡ್ ಕಿಂಗ್ಡಮ್ ಸೇರಿಕೊಂಡಿರುವ ಉದ್ಯಮಿ ನೀರವ್ ಮೋದಿ ಅವರು 2 ಬಿಲಿಯನ್ ಡಾಲರ್ ಮೊತ್ತದ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮೋದಿ ಅವರನ್ನು ಭಾರತಕ್ಕೆ ಕರೆ ತರಲು ತನಿಖಾ ಸಂಸ್ಥೆಗಳು ಪ್ರಯತ್ನಿಸಿದ್ದು, ಮಹಾರಾಷ್ಟ್ರದ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗುವುದು ಎಂದು ತಿಳಿದು ಬಂದಿದೆ.

ಈ ಕುರಿತಂತೆ ಬಂದಿಖಾನೆ ಇಲಾಖೆಯು ರಾಜ್ಯ ಗೃಹ ಇಲಾಖೆಗೆ ಮಾಹಿತಿ ನೀಡಿದೆ. ಇದೇ ಮಾಹಿತಿ ಕೇಂದ್ರ ಸರ್ಕಾರಕ್ಕೂ ತಲುಪಿಸಲಾಗಿದೆ.

Barrack Number 12 at Arthur Road jail kept ready for Nirav Modi

ಮಾರ್ಚ್ 19ರಂದು ಲಂಡನ್ನಿನ ಸ್ಕಾಟ್ಲೆಂಡ್ ಯಾರ್ಡ್ ಅಧಿಕಾರಿಗಳು, ನೀರವ್ ಅವರನ್ನು ಬಂಧಿಸಲಾಗಿದೆ. ಯುಕೆಯ ವೆಸ್ಟ್ ಮಿನಿಸ್ಟರ್ ಕೋರ್ಟ್ ಕಳೆದ ತಿಂಗಳು ನೀರವ್ ಅವರಿಗೆ ಜಾಮೀನು ನಿರಾಕರಿಸಿದ್ದು, ವಂಡ್ಸ್ ವರ್ಥ್ ಜೈಲಿನಲ್ಲಿದ್ದಾರೆ.

ಬರಾಕ್ ನಂ. 12: ಆರ್ಥರ್ ರಸ್ತೆ ಜೈಲಿನ ಈ ಬರಾಕ್ ನ ಸೆಲ್ ನಲ್ಲಿ ಹೆಚ್ಚಿನ ಕೈದಿಗಳಿರುವುದಿಲ್ಲ. ವಿಜಯ್ ಮಲ್ಯ ಅವರನ್ನು ಇರಿಸಲು ಸಿದ್ಧವಾದ ಸೆಲ್ ನಂತೆಯೇ ಈ ಸೆಲ್ ಕೂಡಾ ಇದೆ. 20 ‍X 15 ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ಫ್ಯಾನ್, 6 ಟ್ಯೂಬ್ ಲೈಟ್, ಎರಡು ಕಿಟಕಿ ಇರಲಿದೆ. 2-3 ಕೈದಿಗಳನ್ನು ಇರಿಸಲಾಗುತ್ತದೆ. ಹತ್ತಿ ಮ್ಯಾಟ್, ದಿಂಬು, ಬೆಡ್ ಶೀಟ್, ಹೊದಿಕೆ ಎಲ್ಲವನ್ನು ಯುರೋಪಿಯನ್ ಜೈಲಿನ ನಿಯಮದಂತೆ ನೀಡಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+